ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ನರೇಂದ್ರ ಮೋದಿ ಜೀ ರವರ 9ವರ್ಷ ದ ಸಾಧನೆಯನ್ನು ಮಹಾ ಸಂಪರ್ಕ ಅಭಿಯಾನ ಮಾಡುವ ಮೂಲಕ ಮನೆ ಮನೆಗೆ ತಿಳಿಸುವ ಪದಾಧಿಕಾರಿಗಳ ಸಭೆ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆಯಿತು.
ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಬಳಿಕ 9 ನೇ ವರ್ಷದ ಸಾಧನೆಯನ್ನು ಮತದಾರರಿಗೆ ತಿಳಿಸುವ ಸಾಹಿತ್ಯದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಮಂಡಲದ ಅಧ್ಯಕ್ಷರು ಅಪ್ಪಯ್ಯ ಮಣಿಯಾಣಿ, ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಮೀನಾಕ್ಷಿ ಮಂಜುನಾಥ್, ಉಷಾ ಚಂದ್ರ ಮುಳಿಯ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಕೆ ಪೆರಿಯಾತ್ತೋಡಿ,ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಸುರೇಶ್ ಆಳ್ವ ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷರು ರಾಧಾಕೃಷ್ಣ ಬೋರ್ಕರ್, ದಯಾನಂದ ಶೆಟ್ಟಿ ಉಜಿರೆಮಾರು, ಸುನೀಲ್ ಕುಮಾರ್ ದಡ್ಡು, ಪುನೀತ್ ಮಾಡತ್ತಾರು ಹಾಗೂ ಮಂಡಲದ ಪದಾಧಿಕಾರಿಗಳು, ಮೋರ್ಚಾ- ಪ್ರಕೋಷ್ಟ ಪದಾಧಿಕಾರಿಗಳು, ಹಿರಿಯ & ಕಿರಿಯ ಕಾರ್ಯಕರ್ತರು ಭಾಗವಹಿಸಿದರು.