ಪುತ್ತೂರು: ವಸತಿ ರಹಿತರಿಗೆ, ಬಡ ಕುಟುಂಬದವರಿಗೆ ಸರಕಾರ ನೀಡುತ್ತಿರುವ ವಸತಿ ಯೋಜನೆಗಳ ಅನುದಾನಗಳು ಸರಿಯಾಗಿ ಬಿಡುಗಡೆಯಾಗದೆ ಜನ ತೊಂದರೆ ಪಡುತ್ತಿರುವ ಬಗ್ಗೆ ಚಿಕ್ಕ ಮುಡ್ನೂರು ಕಲಿಯುಗ ಸೇವಾ ಸಮಿತಿ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರಿಗೆ ಮನವಿ ಮಾಡಿದೆ.
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಮಂಜೂರುಗೊಂಡಿರುವ ವಸತಿ ಯೋಜನೆಗಳು ಅನೇಕ ಇದೆ. ಒಂದು ಹಂತದ ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಕೆಲವು ವಸತಿ ಯೋಜನೆಗಳ ಮಂಜೂರಾತಿ ಪತ್ರ ಸಿಕ್ಕಿ ವರ್ಷ ಕಳೆದರೂ ಹಣ ಮಾತ್ರ ಬಿಡುಗಡೆಯಾಗಿಲ್ಲ. ಜನ ಸಾಲ ಮಾಡಿ ಒಂದು ಹಂತದ ಕಾಮಗಾರಿ ನಡೆಸಿ ಸರಕಾರದ ಹಣಕ್ಕಾಗಿ ಕಾಯುವಂತಾಗಿದೆ. ಮನೆಗಳೇ ಇಲ್ಲದೆ ಕಷ್ಟಪಡುತ್ತಿರುವ ಅನೇಕ ಕುಟುಂಬಗಳಿವೆ. ಆದರೆ ಅನುದಾನಗಳು ಸರಿಯಾದ ಸಮಯದಲ್ಲಿ ಬಿಡುಗಡೆಗೊಳ್ಳದೆ ಸಮಸ್ಯೆ ಉಂಟಾಗಿದೆ.
ಆದ್ದರಿಂದ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದೆ.