ಸೌಜನ್ಯ ಹತ್ಯೆ ಪ್ರಕರಣದ ನಿಜವಾದ ಆರೋಪಿಗಳ ಪತ್ತೆಗೆ ದೈವದ ಮೊರೆ ಹೋದ ಸೌಜನ್ಯ ಕುಟುಂಬ | 6 ತಿಂಗಳೊಳಗೆ ಶಿಕ್ಷೆಯಾದ್ರೆ ಕಾನತ್ತೂರು ದೈವ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಹರಕೆ

ಬೆಳ್ತಂಗಡಿ: ಧರ್ಮಸ್ಥಳದ ಸಮೀಪ ನೇತ್ರಾವತಿಯ ಪಕ್ಕದ ಕಾಡಿನಲ್ಲಿ ಭೀಕರ ಅತ್ಯಾಚಾರಕ್ಕೀಡಾಗಿ ಕೊಲೆಗೀಡಾಗಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ 11 ವರ್ಷಗಳ ಬಳಿಕ ಪ್ರಕರಣದ ತನಿಖೆ ಮರು ಜೀವ ಪಡೆದುಕೊಳ್ಳುತ್ತಿದೆ.

ಸಿಬಿಐ ವಿಶೇಷ ಕೋರ್ಟ್ ನಲ್ಲಿ, ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಬರುತ್ತಲೇ ನಿಜವಾದ ಅಪರಾಧಿ ಯಾರು ಅನ್ನುವ ಪ್ರಶ್ನೆ ಉದ್ಭವ ಆಗಿದೆ. ಸೌಜನ್ಯ ಪೋಷಕರು ಮತ್ತು ಹೋರಾಟಗಾರರು ಮಾಧ್ಯಮಗಳ ಮುಂದೆ ಬಂದು ತಮ್ಮ ನೋವನ್ನು ಮತ್ತು ಬೇಸರವನ್ನು ಮತ್ತು ನಮ್ಮ ನ್ಯಾಯ ವ್ಯವಸ್ಥೆಯ ಮೇಲಿನ ಒಟ್ಟಾರೆ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಬಹಳ ದೊಡ್ಡ ದೈವ ಒಂದಕ್ಕೆ, ಕಾರ್ಮಿಕ ಕ್ಷೇತ್ರಕ್ಕೆ ಹರಕೆ ಇಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯಾ ಗೌಡ ಮಾವ ವಿಠಲ ಗೌಡ ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಸೌಜನ್ಯ ಅತ್ಯಾಚಾರಿಗಳಿಗೆ 6 ತಿಂಗಳೊಳಗೆ ಶಿಕ್ಷೆಯಾದ್ರೆ ಕಾನತ್ತೂರು ದೈವಗಳಿಗೆ ಬಂಗಾರ ನಾಲಿಗೆ, 1 ದಿನದ ನೇಮೋತ್ಸವವನ್ನು ನೀಡುತ್ತೇವೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಬೆಳ್ಳಿ ರಥ, ಅಣ್ಣಪ್ಪನಿಗೆ ಬಂಗಾರದ ಕಡ್ತಲೆ ಹರಕೆಯಾಗಿ ಒಪ್ಪಿಸುವುದಾಗಿ ತಿಳಿಸಿದ್ದಾರೆ.

ನಾವು ಆಪ್ತರಕ್ಷಕರು ಎಂದುಕೊಂಡು ಇರುವ ಪೊಲೀಸರು, ವೈದ್ಯರು ನಾರಾಯಣ ಹರಿ ಎಂದು ದೇವರಲ್ಲಿ ವೈದ್ಯರಲ್ಲಿ ಕಾಣುವ ವೈದ್ಯರುಗಳು, ಜನಪದ ಕೆಲಸ ಮಾಡಬೇಕಾದ ಅಧಿಕಾರಿಗಳು, ಸರಿಯಾಗಿ ತನಿಖೆ ನಡೆಸಿದ ತನಿಖಾ ಸಂಸ್ಥೆಗಳು, ಜನರ ಕಷ್ಟ ಇರುವವರ ಪರ ಯಾವತ್ತೂ ನಿಲ್ಲಬೇಕಾದ ರಾಜಕಾರಣಿಗಳು, ಒಟ್ಟಾರೆ ಭವ್ಯ ಭಾರತದ ಬಡಕಲು ವ್ಯವಸ್ಥೆ ಕೈ ಚೆಲ್ಲಿ ಕೂತ ಸಂದರ್ಭದಲ್ಲಿ ಸೌಜನ್ಯ ಗೌಡ ಕುಟುಂಬ ದೈವ ದೇವರ ಮೊರೆ ಹೋಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top