ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ | ಕಟ್ಟೆಚ್ಚರದಿಂದ ಇರುವಂತೆ ಅಧಿಕಾರಿಗಳಿಗೆ ಶಾಸಕರ ಸೂಚನೆ

ಪುತ್ತೂರು: ಮುಂದಿನ ಕೆಲವು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವ ಇರುವ ಬಗ್ಗೆ ಹವಾಮಾನ ಇಲಾಖೆ ಸೂಚನೆಯನ್ನು ನೀಡಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟೆಚ್ಚರದಿಂದ ಇರುವಂತೆ ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದ್ದಾರೆ.

ಮಳೆ ಈ ಬಾರಿ ತಡವಾಗಿ ಆರಂಭಗೊಂಡಿದ್ದರೂ ಜುಲೈ ಪ್ರಾರಂಭದಲ್ಲೇ ಹೆಚ್ಚಿನ ಮಳೆಯಾಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳಯಾಗಲಿದೆ. ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇದ್ದು ಅಧಿಕಾರಿಗಳು ದಿನದ 24 ಗಂಟೆಯೂ ಸದಾ ಎಚ್ಚರದಿಂದ ಇರಬೇಕು ಎಂದು ಶಾಸಕರು ಸೂಚನೆ ನೀಡಿದ್ದಾರೆ.

ಮರಗಳು ಬಿದ್ದು ಹಾನಿಯಾಗುವುದು, ವಿದ್ಯುತ್ ಅವಘಡ ಸೇರಿದಂತೆ ಯಾವುದೇ ಅನಾಹುತ ನಡೆದರೂ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಅನಾಹುತದಿಂದ ಯಾರೇ ಆಗಲಿ ಗಾಯಗೊಂಡರೆ ಅಂಥವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಯ ಚಿಕಿತ್ಸೆ ಕೊಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಮರ ಬಿದ್ದು ಅಥವ ಧರೆ ಜರಿದು ಮನೆಗಳಿಗೆ ಹಾನಿಯಾದರೆ ಆ ಮನೆಗಳಲ್ಲಿ ಕುಟುಂಬಗಳಿಗೆ ವಾಸ್ತವ್ಯ ಮಾಡಲು ಸಾಧ್ಯವಿಲ್ಲದೇ ಹೋದಲ್ಲಿ ಅಥವಾ ವಾಸ್ತವ್ಯವಾಗಲು ಅಪಾಯಕಾರಿ ಸ್ಥಳ ಎಂದು ಗೊತ್ತಾದಲ್ಲಿ ತಕ್ಷಣ ಅವರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಬೇಕು. ಕುಡಿಯುವ ನೀರು , ವಿದ್ಯುತ್  ಸಮರ್ಪಕವಾಗಿರಬೇಕು. ನಗರಸಭಾ ವ್ಯಾಪ್ತಿಯಲ್ಲಿ ಎಚ್ಚರದಿಂದ ಕಾರ್ಯನಿರ್ವಹಿಸುವಂತೆಯೂ ನಗರಸಭಾ ಅದಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪುತ್ತೂರು ಸಹಾಯಕ ಆಯುಕ್ತರು, ತಹಸಿಲ್ದಾರ್, ಕಂದಾಯ ನಿರೀಕ್ಷಕರು , ಅಗ್ನಿ ಶಾಮಕದಳ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸದಾ ಕಟ್ಟೆಚ್ಚರದಿಂದ ಇರುವಂತೆ ಶಾಸಕರು ಸೂಚನೆಯನ್ನು ನೀಡಿದ್ದಾರೆ.































 
 

ವಿಧಾನಸಭಾ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ನಾನು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದು ಕ್ಷೇತ್ರದ ಆಗುಹೋಗುಗಳ ಬಗ್ಗೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಶಾಸಕರು ತಿಳಿಸಿದ್ದಾರೆ.

ನಗರದ ಹೊರವಲಯದ ಸಿಂಹವನದಲ್ಲಿ ಭಾರೀ ಗಾತ್ರದಮರವೊಂದು ಗಾಳಿಗೆ ಉರುಳಿ ಬಿದ್ದಿದ್ದು ಮನೆಯೊಂದಕ್ಕೆ ಬಾಗಶ: ಹಾನಿಯಾಗಿದೆ. ವಿಷಯ ತಿಳಿದ ಶಾಸಕರು ತಡರಾತ್ರಿ ಸಹಾಯಕ ಆಯುಕ್ತರಿಂದ ಮಾಹಿತಿ ಪಡೆದುಕೊಂಡಿದ್ದು ತಕ್ಷಣವೇ ಮರವನ್ನು ತೆರವುಗೊಳಿಸಿ ಮನೆಗೆ ಹಾನಿಯಾಗಿದ್ದಲ್ಲಿ ತಕ್ಷಣ ದುರಸ್ಥಿಗೆ ನೆರವು ನೀಡುವಂತೆಯೂ ಸೂಚವನೆಯನ್ನು ನೀಡಿದ್ದಾರೆ. ಶಾಸಕರ ಸೂಚನೆಯ ಬಳಿಕ ತಡರಾತ್ರಿಯೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು ಮನೆಗೆ ಬಿದ್ದಿದ್ದ ಮರದ ಗೆಲ್ಲುಗಳನ್ನು ತೆರವು ಮಾಡಲಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಮರವನ್ನು ಬೆಳಿಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳ ಜೊತೆಗೆ ಶಾಸಕ ಅಶೋಕ್ ರೈ ಅಭಿಮಾನಿಬಳಗದ ತಂಡದ ಸಹಕಾರದೊಂದಿಗೆ ಮರ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top