ಬೆಂಗಳೂರು: ಪ್ಯಾನ್ ಕಾರ್ಡನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಜೂನ್ 30, 2023ರ ವರೆಗೆ ಗಡುವು ನೀಡಲಾಗಿತ್ತು. ಆದರೆ ಈ ಗಡುವು ಮುಗಿದ ಬೆನ್ನಲ್ಲೇ ಇನ್ನು ಪಾನ್ ಹಾಗೂ ಆಧಾರ್ ಲಿಂಕ್ ಮಾಡದವರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಹೌದು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಸರ್ಕಾರವುಕೊಟ್ಟ ಕೊನೆಯ ದಿನಾಂಕ ಮುಗಿದಿದೆ. ಈ ಗಡುವನ್ನು ಈ ಹಿಂದೆ ಹಲವು ಬಾರಿ ಸರ್ಕಾರ ವಿಸ್ತರಣೆ ಮಾಡಿದ್ದರೂ ಈ ಬಾರಿ ವಿಸ್ತರಿಸಿಲ್ಲ. ಒಬ್ಬ ವ್ಯಕ್ತಿಯು ಇನ್ನೂ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅವರ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. PAN ನಿಷ್ಕ್ರಿಯಗೊಂಡರೆ, ನೀವು ಇದರ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾದ ಕೆಲವು ಸೇವೆಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪಾನ್, ಆಧಾರ್ ಲಿಂಕ್ ಮಾಡಿಸದೆ ಪಾನ್ ಕಾರ್ಡ್ ನಿಷ್ಕ್ರಿಯ ಮಾಡಿಕೊಂಡವರಿಗೆ ಗುಡ್ ನ್ಯೂಸ್ ಒಂದಿದೆ.
ಅದೇನೆಂದರೆ ನಿಮ್ಮ ಪಾನ್ ನಿಷ್ಕ್ರಿಯಗೊಂಡರೆ 1,000ರೂ ಶುಲ್ಕವನ್ನು ಪಾವತಿಸಿದ ನಂತರ ಆಧಾರ್ ಲಿಂಕ್ ಮಾಡಿದರೆ ನಂತರ 30 ದಿನಗಳಲ್ಲಿ ಪ್ಯಾನ್ ಅನ್ನು ಮತ್ತೆ ಕಾರ್ಯಗತಗೊಳಿಸಬಹುದು. ಅದು ಹೇಗೆಂದರೆ Taxmann.com ನ DGM, ನವೀನ್ ವಾಧ್ವಾ ಹೇಳುವಂತೆ , ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಆದ ನಂತರವೂ ವ್ಯಕ್ತಿ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಬಹುದು.
ಲಿಂಕ್ ಮಾಡಿದ ದಿನಾಂಕದಿಂದ 30 ದಿನಗಳೊಳಗೆ PAN ಮತ್ತೆ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ತನ್ನ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜುಲೈ 20 ವರೆಗೆ ಲಿಂಕ್ ಮಾಡಬಹುದು. 1000 ರೂ. ದಂಡವನ್ನು ಪಾವತಿಸಿದ ನಂತರ, ಪ್ಯಾನ್ ಲಿಂಕ್ ಮಾಡಿದರೆ ಆಗಸ್ಟ್ 19 ರಂದು ಅಥವಾ ಮೊದಲು ಪ್ಯಾನ್ ನಿಷ್ಕ್ರಿಯವಾಗುವುದನ್ನು ತಡೆಯ ಬಹುದಾಗಿದೆ. ಅಂದಹಾಗೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಮಾರ್ಚ್ 28, 2023 ರ ಅಧಿಸೂಚನೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.