ಮಂಗಳೂರು: ಐಎಸ್ ಉಗ್ರ ಸಂಘಟನೆ ಜತೆಗೂಡಿ ದೇಶಾಸ್ಯಂತ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ 9 ಮಂದಿ ವಿರುದ್ಧ ಎನ್‍ಐಎ ಆರೋಪ ಪಟ್ಟಿ ಸಲ್ಲಿಸಿದೆ.
ಮಾಝ್ ಮುನೀರ್ ಅಹಮ್ಮದ್ (23), ಮಹಮ್ಮದ್ ಶಾರೀಕ್ (25), ರಿಶಾನ್ ತಾಜುದ್ದೀನ್ ಶೇಖ್ (22), ವಝೀನ್ ಅಬ್ದುಲ್ ರಹಿಮಾನ್ (22), ಹುಝೈರ್ ಫರ್ಹಾನ್ ಬೇಗ್ (22), ನದೀಮ್ ಅಹಮ್ಮದ್ ಕೆ. (22), ನದೀಮ್ ಫೈಝಲ್ ಎನ್. (27) ಹಾಗೂ ಜಬೀವುಲ್ಲಾ ಎಂಬವರ ಮೇಲೆ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಉಗ್ರ ಚಟುವಟಿಕೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಲುವಾಗಿ ಶಾರೀಕ್, ಮುನೀರ್ ಹಾಗೂ ಯಾಸಿನ್ ವಿದೇಶದಲ್ಲಿ ಐಎಸ್ ಉಗ್ರರ ಜತೆ ಸೇರಿ ಕ್ರಿಮಿನಲ್ ಪಿತೂರಿಗೆ ನಡೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಐಎಸ್ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಆನ್‍ಲೈನ್ ಮೂಲಕ ನಿರ್ವಹಣೆ ಮಾಡಿರುವ ಆರೋಪಿಗಳಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸಿನ ನೆರವು ನೀಡಲಾಗಿದೆ ಎಂದು ಎನ್‍ಐಎ ತಿಳಿಸಿದೆ.