ಪುತ್ತೂರು : ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ಎಂಬವರು ದಿಢೀರ್ ನಾಪತ್ತೆಯಾದ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ಮಧ್ಯಾಹ್ನ 3 ಗಂಟೆ ವರೆಗೆ ಪುತ್ತೂರಿನಲ್ಲಿದ್ದ ಅವರು ಬಳಿಕ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಜು.3 ರಂದು ಅವರ ಪುತ್ರನಿಗೆ ಮದುವೆ ನಡೆಯಲಿದ್ದು, ಜು.2 ರಂದು ನಡೆಯಬೇಕಿದ್ದ ಮೆಹೆಂದಿ ರದ್ದು ಮಾಡಿದ್ದಾರೆ. ಇದೀಗ ನಾಪತ್ತೆಯಾಗಿರುವ ಕುರಿತು ಕುಟುಂಬದವರಿಗೆ ಅಘಾತ ಉಂಟು ಮಾಡಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.