ಪುತ್ತೂರು: ಪುತ್ತೂರು ಶಾಸಕರು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಕುರಿತು ಮಾಹಿತಿ ಇಲ್ಲದೆ ಕೃಷಿಕರು ಹಾಗೂ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ರೈತರನ್ನು ಗೊಂದಲದಲ್ಲಿ ಸಿಲುಕಿಸಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಅವರು ಶನಿವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯು ಅಡಿಕೆ, ಕಾಳು ಮೆಣಸು ಇತ್ಯಾದಿ ತೋಟಗಾರಿಕಾ ಬೆಳೆಗಳಿಗೆ ಜಾರಿಯಲ್ಲಿದ್ದು ನಿಯಮನುಸಾರ ರೈತರು ಪ್ರೀಮಿಯಮ್ ಹಣ ಕಟ್ಟಿ ಮೂರು ವರ್ಷಗಳಿಂದ ಬೆಳೆ ಹಾನಿಯ ಪರಿಹಾರ ಮೊತ್ತಗಳನ್ನು ಕಾಲ-ಕಾಲಕ್ಕೆ ರೈತರು ವಿಮಾ ಕಂಪನಿಯಿಂದ ಪಡೆದುಕೊಂಡು ಬರುತ್ತಿರುತ್ತಾರೆ, ಪ್ರಕೃತ ಮೂರು ವರ್ಷಕೊಮ್ಮೆ ನಡೆಯುವ ಟೆಂಡರ್ ಪ್ರಕ್ರಿಯೆ ನಡೆದು ಮುಂದಿನ ಮೂರು ವರ್ಷಗಳಿಗೆ E-governance ಮುಖಾಂತರ ಟೆಂಡರ್ ಕರೆದಾಗ ಯಾವುದೇ ವಿಮಾ ಕಂಪೆನಿಯವರು ಟೆಂಡರ್ ಹಾಕದೆ ಇರುವುದರಿಂದ 2ನೇ ಬಾರಿಗೆ ಮೇ.27 ರಂದು ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೆ ಮುಗಿಲನ್ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆ ಸೇರಿ ಹವಮಾನ Term-sheet ಮಾಡಿ ಸರಕಾರಕ್ಕೆ, ಕಳುಹಿಸಿರುತ್ತಾರೆ. ಸರಕಾರವು ಜಿಲ್ಲಾಧಿಕಾರಿ ಕಳುಹಿಸಿದ Term-sheet ಮಂಜೂರು ಮಾಡಿ ಕಳುಹಿಸಿದ ಮೇಲೆ ಮತ್ತೆ ಜಿಲ್ಲಾಧಿಕಾರಿಗಳು ಪುನಃ ಟೆಂಡರ್ ಕರೆಯಬೇಕು ಇದು ವಾಸ್ತವ ವಿಚಾರವಾಗಿ ಎಂದು ತಿಳಿಸಿದ ಅವರು, ರಾಜ್ಯ ಸರಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ ಡಿಸಿ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಿದ ಟರ್ಮ್ ಶೀಟನ್ನು ಅಪ್ರೂವಲ್ ಮಾಡಿ ಟೆಂಡರ್ ಕರೆದು ಪ್ರೀಮಿಯಂ ರೈತರನ್ನು ಹಣ ಕಟ್ಟಿ ವಿಮಾ ಯೋಜನೆಯಲ್ಲಿ ತೊಡಗಿಸುವಂತೆ ಮಾಡಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದ ಆಹಾರ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕೃಷಿ ಇಲಾಖೆಯ ಮುಖಾಂತರ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆದಾರಿತ ಕೃಷಿ ವಿಮಾ ಯೋಜನೆ ತೋಟಗಾರಿಕಾ ಇಲಾಖೆಯ ಮುಖಾಂತರ ಜಾರಿಯಲ್ಲಿದೆ. ಹೆಕ್ಟರಿಗೆ ಅಡಿಕೆ ಬೆಳೆಗೆ ವಿಮಾ ಮೊತ್ತ 1,28,000 ಆಗಿರುತ್ತದೆ ಪ್ರೀಮಿಯಮ್ ಮೊತ್ತ 32,000
ಆಗಿರುತ್ತದೆ ಇದರಲ್ಲಿ ರೈತರ ಪಾಲು 5% ರೂ 6,400 ಹಾಗೂ ರಾಜ್ಯ ಸರಕಾರ 10% ರೂ 12,200 ಮತ್ತು ಕೇಂದ್ರ
ಸರಕಾರ 10% 12,800 ರೂಪಾಯಿ ಪ್ರೀಮಿಯಮ್ ಕಟ್ಟಿಲು ಈ ಯೋಜನೆಯಲ್ಲಿ ನಿಯಮ ರೂಪಿಸಲಾಗಿರುತ್ತದೆ
ಹವಾಮಾನದಲ್ಲಿ ಏರು ಪೇರು ಆದಾಗ ರೈತರ ಬೆಳೆಗೆ ಹಾನಿಯಾಗಿ ನನ್ನ ಆದಾಗ ಸರಕಾರದ ನಿಯಮಾವಳಿಯಂತೆ ಪರಿಹಾರ ಮೊತ್ತವನ್ನು ಯಾವ ವಿಮಾ ಕಂಪೆನಿಯು ಟೆಂಡರ್ ವಹಿಸಿಕೊಂಡು ಬರುತ್ತದೋ ಆ ಕಂಪೆನಿಯು ರೈತರಿಗೆ ಬೆಳೆ ಹಾನಿ ವಿಮಾ ಮೊತ್ತವನ್ನು ನೀಡ ತಕ್ಕದ್ದು,
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ ಪೆರಿಯತ್ತೋಡಿ, ನಿತೀಶ್ ಶಾಂತಿವನ, ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಕೆ.ವಿ ಪ್ರಸಾದ್, ಪಾಣಾಜೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್ ಉಪಸ್ಥಿತರಿದ್ದರು.