ಪುತ್ತೂರು: ಹೆಚ್ಚುವರಿ ಜನರಲ್ ಕೆ.ಎಂ.ನಟರಾಜ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಮರ ನೇಮಕಗೊಳಿಸಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
ಹಿರಿಯ ವಕೀಲ ತುಷಾರ್ ಮೆಹ್ತಾ ಅವರನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮ ಮಾಡಲಾಗಿದೆ. ಜತೆಗೆ ಹೆಚ್ಚುವರಿ ಸಾಲಿಸಿಟರ್ ಆಗಿ ಕೆ.ಎಂ.ನಟರಾಜ್ ಅವರನ್ನು ಮರು ನೇಮಕ ಮಾಡಲಾಗಿದೆ.
ವಿಕ್ರಮ್ ಜಿತ್ ಬ್ಯಾನರ್ಜಿ, ಬಲ್ವೀರ್ ಸಿಂಗ್, ಎಸ್.ವಿ.ರಾಜು, ಎನ್.ವೆಂಕಟರಾಮನ್, ಐಶ್ವರ್ಯ ಭಾಟಿ ಸುಪ್ರೀಂ ಕೋರ್ಟ್‍ಗೆ ಮರು ನೇಮಕಗೊಂಡಿರುವ ಇತರ ಐದು ಹೆಚ್ಚುವರಿ ಸಾಲಿಸಿಟರ್ ಜನರಲ್ ಗಳಾಗಿದ್ದಾರೆ.