ನವದೆಹಲಿ: ದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಗೆ ಆಧಾರ್ ಕಡ್ಡಾಯವಲ್ಲ.
ಆಧಾರ್ ದೃಢೀಕರಣವನ್ನ ಕೈಗೊಳ್ಳಲು ರಿಜಿಸ್ಟ್ರಾರ್ ಜನರಲ್ (RGI) ಕಚೇರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದಾಗ್ಯೂ, ಅಂತಹ ನೋಂದಣಿಗೆ ಆಧಾರ್ ಕಡ್ಡಾಯವಲ್ಲ. ಜನನ ಮತ್ತು ಮರಣ ನೋಂದಣಿ ಸಮಯದಲ್ಲಿ ಒದಗಿಸಲಾದ ಗುರುತಿನ ವಿವರಗಳನ್ನ ದೃಢೀಕರಿಸಲು ಆಧಾರ್ ಡೇಟಾಬೇಸಿನ ಬಳಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆರ್ ಜಿಐ ಕಚೇರಿಗೆ ಅನುಮತಿ ನೀಡಿದೆ ಎಂದು ಜೂ.27 ರಂದು ಪ್ರಕಟವಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ರ ಅಡಿಯಲ್ಲಿ, ನೇಮಕಗೊಂಡ ರಿಜಿಸ್ಟ್ರಾರ್ಗೆ ಆಧಾರ್ ಸಂಖ್ಯೆಯ ಪರಿಶೀಲನೆಗಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ಹೌದು ಅಥವಾ ಇಲ್ಲ ಆಧಾರ್ ದೃಢೀಕರಣವನ್ನ ಕೈಗೊಳ್ಳಲು ಅವಕಾಶ ನೀಡಲಾಗುವುದು ಎಂದು ಅದು ಹೇಳುತ್ತದೆ.