ಪುತ್ತೂರು: ಹಿರಿಯ ನ್ಯಾಯವಾದಿ, ಪುತ್ತೂರು ಒಕ್ಕಲಿಗ ಗೌಡ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಮುಂಗ್ಲಿಮನೆ (81) ಹೃದಯಾಘಾತದಿಂದ ಗುರುವಾರ ನಿಧನರಾದರು.
ಕೊಂಬೆಟ್ಟು ಶ್ರಿ ಮಹಾಲಿಂಗೇಶ್ವರ ಐಟಿಐ ನಿರ್ದೇಶಕರಾಗಿದ್ದ ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಬಂದಿರುವ ಪುತ್ರಿಯನ್ನು ಬಸ್ ನಿಲ್ದಾಣದಿಂದ ದರ್ಬೆಯಲ್ಲಿರುವ ಮನೆಗೆ ಕಾರಿನಲ್ಲಿ ಕರೆದುಕೊಂಡು ಬಂದ ಬಳಿಕ ಮನೆಯಲ್ಲಿ ವಿಶ್ವಾಂತ್ರಿ ಪಡೆಯುತ್ತಿದ್ದ ಸಂದರ್ಭ ಹೃದಯಾಘಾತವಾಗಿ ನಿಧನರಾದರು..
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಾಲಕ ಯು.ಪಿ.ರಾಮಕೃಷ್ಣ, ನಿರ್ದೇಶಕರು, ಪ್ರಾಂಶುಪಾಲ ಪ್ರಕಾಶ್ ಪೈ,, ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ, ಪದಾಧಿಕಾರಿಗಳು ಭೇಟಿ ನೀಡಿ ಸಂತಾಪ ಸೂಚಿಸಿದರು.