ಪುತ್ತೂರು : ಮಳೆಗಾಲ ಶುರುವಿಟ್ಟುಕೊಂಡ ಬೆನ್ನಲ್ಲೇ ತರಕಾರಿ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಟೊಮೆಟೋ ದರ ನೂರರ ಗಡಿ ದಾಟಿದೆ.
ಕಳೆದ ಕೆಲವು ದಿನಗಳಿಂದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ ಉಂಟಾಗಿದ್ದು, ಟೊಮೆಟೋ ಬೆಳೆಗೆ ಹಾನಿಯಾಗುವುದರ ಜತೆಗೆ ಮಾರುಕಟ್ಟೆಗೆ ಪೂರೈಕೆಯಲ್ಲಿ ಕುಂಠಿತವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಟೊಮೆಟೋ ಬೆಲೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದ್ದು, ಒಟ್ಟಿನಲ್ಲಿ ಟೊಮೆಟೋ ಉತ್ಪಾದನೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ಒಂದೂವರೆ ವರ್ಷದ ಹಿಂದೆ ಟೊಮೆಟೋ ನೂರರ ಗಡಿ ದಾಟಿತ್ತು. ಬಳಿಕ ಇಳಿಮುಖವಾದ ದರ 20-30 ರ ಆಸುಪಾಸಿನಲ್ಲಿತ್ತು. ಹೈದರಾಬಾದ್, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಟೊಮೆಟೋ ದರ ನೂರರ ಗಡಿ ದಾಟಿದೆ.
ಟೊಮೆಟೋ ದರ ಜತೆ ಇನ್ನಿತರ ತರಕಾರಿಗಳ ಬೆಲೆ ಏರಿಕೆಯಾಗಿದೆ.