ಪುತ್ತೂರು: ಬೆಂಗಳೂರು ಕೆ.ಆರ್.ಪುರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ಪುತ್ತೂರಿನ ನಿವಾಸಕ್ಕೆ ಬುಧವಾರ ಲೋಕಾಯುಕ್ತ ದಾಳಿ ಪೊಲೀಸರು ದಾಳಿ ಮಾಡಿದ್ದಾರೆ.

ಪುತ್ತೂರಿನ ಸೊರಕೆ ಎಂಬಲ್ಲಿರುವ ಮನೆಗೆ ದಾಳಿ ಮಾಡಿದ ಸಂದರ್ಭ ಕಂತೆ ಕಂತೆ ನೋಟು ಪತ್ತೆಯಾಗಿದ್ದು, ಆದಾಯಕ್ಕಿಂತ ಜಾಸ್ತಿ ಆದಾಯ ಹೊಂದಿದ ಆರೋಪದ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಜಿತ್ ಕುಮಾರ್ ರೈ ಅವರ ತಂದೆ ಆನಂದ ರೈ ಅವರು ಸರ್ವೆಯರ್ ಆಗಿ ಸರಕಾರಿ ಹುದ್ದೆಯಲ್ಲಿ ಕರ್ತವ್ಯದಲ್ಲಿದ್ದಾಗ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ಅಜಿತ್ ಕುಮಾರ್ ರೈ ಅವರಿಗೆ ಸರ್ವೆಯರ್ ಕೆಲಸ ಸಿಕ್ಕಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದರು.