ಮಂಗಳೂರು: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಗಿಡಗಳಿಂದ ವಿಶಿಷ್ಟವಾದ ತುಲಾಭಾರ ಸೇವೆ ಸಲ್ಲಿಸುವ ಮೂಲಕ ವಿನೂತನ ಪರಂಪರೆಗೆ ನಾಂದಿ ಹಾಡಲಾಯಿತು.
ಹಿರಿಯ ವಿದ್ವಾಂಸ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ತನ್ನ ನಿವಾಸದಲ್ಲಿ ಸ್ವಾಮೀಜಿಯವರಿಗೆ ವೃಕ್ಷ, ಬೀಜ, ಸಸಿಗಳಿಂದ ಕೂಡಿದ ಹಲಸು, ಮಾವು, ಹರಿವೆ, ಅಲಸಂಡೆ, ಹಾಗಲ, ತುಂಬೆ ಮುಂತಾದ ಸಸಿಗಳಿಂದ ತುಲಾಭಾರ ನೆರವೇರಿತು.
ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಭಕ್ತರೂ ತುಲಾಭಾರ ಸಸಿಗಳನ್ನು ತಂದಿದ್ದರು. ತುಲಾಭಾರದ ಬಳಿಕ ಈ ಗಿಡಗಳನ್ನು ಭಕ್ತರಿಗೆ ಹಂಚಲಾಯಿತು.
ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, ಪರಿಸರ ಸಂರಕ್ಷಣೆ ಮಾಡುವ ದೊಡ್ಡ ಹೊಣೆ ನಮಗಿದೆ. ಮರಗಳಿಂದ ಹಣ್ಣು, ನೆರಳು ಸಿಗುತ್ತದೆ. ಮುಖ್ಯವಾಗಿ ಪ್ರಾಣನಾಯು ಪರಿಸರ ಸಂರಕ್ಷಣೆಯಿಂದ ಸಿಗುತ್ತದೆ. ಕೋವಿಡ್ ಸಂದರ್ಭದಲ್ಲಿ ಪ್ರಾಣವಾಯುವಿನ ಮಹತ್ವವನ್ನು ನಾವೆಲ್ಲರೂ ಅರಿತಿದ್ದೇವೆ. ಆದರೆ ನಾವು ನಮ್ಮ ಕೈಯ್ಯಾರೆ ಪ್ರಾಣವಾಯುವನ್ನು ಹಾಳು ಮಾಡುತ್ತಿದ್ದೇವೆ ಎಂದ ಅವರು, ದ್ವಿಚಕ್ರ ವಾಹನ ಬಳಸುವವರು ಎರಡು ಗಿಡಗಳನ್ನು, ನಾಲ್ಕು ಚಕ್ರ ಬಳಸುವವರು ನಾಲ್ಕು ಗಿಡಗಳನ್ನು ನೆಡಬೇಕು. ಮರ ನೆಡದವರಿಗೆ ಬದುಕುವ ಹಕ್ಕು ಇಲ್ಲ ನಾವೆಲ್ಲರೂ ಪರಿಸರ ರಕ್ಷಣ ಮಾಡೋಣ ಎಂದರು.