ಕಡಬದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಆಚರಣೆ

ಕಡಬ : ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ದಿನಾಚರಣೆ ಕಡಬ ತಾಲೂಕು ಕಛೇರಿಯ  ತಹಸೀಲ್ದಾರ್ ಕಚೇರಿಯಲ್ಲಿ ನಡೆಯಿತು.

ದೀಪ ಬೆಳಗಿಸಿ ನಾಡಪ್ರಭು ಶ್ರೀ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ  ಕಡಬ ತಹಸೀಲ್ದಾರ್ ಟಿ ರಮೇಶ್ ಬಾಬು, ಕೆಂಪೇ ಗೌಡ ಒಬ್ಬ ದೂರದೃಷ್ಠಿಯ ನಾಯಕನಾಗಿ  ಬೆಂಗಳೂರನ್ನು‌ ಜಗತ್ತು ನೋಡುವಂತೆ  ಅಭಿವೃದ್ಧಿ ಪಡಿಸಿದ್ದಾರೆ, ಕೃಷಿಯಿಂದಲೇ ಆರ್ಥಿಕ ಸಬಲೀಕರಣ ಎಂದು ಮನಗಂಡು ಬೆಂಗಳೂರು ಆಸು ಪಾಸಿನಲ್ಲಿ ಹತ್ತಾರು ಕೆರೆಗಳನ್ನು‌ನಿರ್ಮಾಣ ಮಾಡಿ ಕೃಷಿಗೆ ಉತ್ತೇಜನ ನೀಡಿದ್ದಾರೆ.. ಇಂತಹ ಮಹಾನ್ ನಾಯಕರ ಜನ್ಮ‌ದಿನವನ್ನು‌ ಮುಂದಿನ ದಿಗಳಲ್ಲಿ  ಇಲ್ಲಿ ಒಕ್ಕಲಿಗ ಗೌಡ ಸಂಘದೊಂದಿಗೆ  ಅದ್ಧೂರಿಯಾಗಿ ಸಾರ್ವಜನಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಒಕ್ಕಲಿಗ ಕಡಬ ಸಂಘದ ಅಧ್ಯಕ್ಷ ಸುರೇಶ್ ಬೈಲು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಮೀರಸಾಹೇಬ್ , ನಿವೃತ್ತ ಶಿಕ್ಷಕ  ಜನಾರ್ದನ ಗೌಡ ಪನೆ ಮಜಲು ಕೆಂಪೇಗೌಡರ ಬಗ್ಗೆ ಮಾತನಾಡಿದರು.































 
 

 ವೇದಿಕೆಯಲ್ಲಿ ಪಟ್ಟದ ಪಂಚಾಯತ್  ಮುಖ್ಯಾಧಿಕಾರಿ  ಪಕಿರ ಮೂಲ್ಯ , ಕಡಬ ತಾಲೂಕು ಪಂಚಾಯತ್  ಸಹಾಯಕ ನಿರ್ದೇಶಕ  ಚೆನ್ನಪ್ಪ ಗೌಡ ಕಜೆ ಮೂಲೆ ಕಡಬ ಒಕ್ಕಲಿಗ ಗೌಡ ಸಂಘದ ಪ್ರಮುಖರಾದ ತಮ್ಮಯ್ಯ ಗೌಡ ಸುಳ್ಯ ಮಂಜುನಾಥಗೌಡ ಕೋಲಂತಡಿ, ಗಣೇಶ್ ಗೌಡ ಕೈಕುರೆ ಪ್ರಶಾಂತ್ ಪಂಜೋಡಿ ಮತ್ತಿತರರು ಉಪಸ್ಥಿತರಿದ್ದರು.  ತಹಶೀಲ್ದಾರ್ ಕಛೇರಿ ಸಿಬ್ಬಂದಿ . ಉದಯ ಕುಮಾರ್ ಪ್ರಾರ್ಥಿಸಿದರು. ಉಪತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ   ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಉಪ ತಹಸೀಲ್ದಾರ್ ಮನೋಹರ್  ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top