ಬೆಂಗಳೂರು: ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದು, ಸಿದ್ಧರಾಮಯ್ಯ ಸರಕಾರದ ಬಜೆಟ್ ಅಧಿವೇಶನ ಜು.3 ರಿಂದ ಆರಂಭವಾಗಲಿದ್ದು, ಜು.7 ರಂದು ಸಿಎಂ ಸಿದ್ಧರಾಮಯ್ಯ ಬಜೆಟ್ ಮಂಡಿಸಲಿದ್ದಾರೆ.
ಅಧಿವೇಶನಕ್ಕೂ ಮುತ್ತ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ನೀಡಿದ ಐದು ಭರವಸೆಗಳ ಜಾರಿ ವಿಳಂಬ, ಹಿಂದಿನ ಸಿಎಂ ಬೊಮ್ಮಾಯಿ ಜಾರಿಗೊಳಿಸಿದ ಕಾನೂನುಗಳನ್ನು ಹಿಂಪಡೆಯುವುದು ಸೇರಿದಂತೆ ಹಲವು ವಿಷಯಗಳಲ್ಲಿ ಸಿದ್ಧರಾಮಯ್ಯ ಸರಕಾರವನ್ನು ತರಾಟೆಗೆತ್ತಿಕೊಳ್ಳಲು ಸಜ್ಜಾಗುತ್ತಿದೆ ಎಂದು ತಿಳಿದು ಬಂದಿದೆ.
ಅಧಿವೇಶನ ಜು.3 ರಂದು ಆರಂಭಗೊಂಢು ಜು.7 ರಂದು ಮುಗಿಯಲಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗ್ಯಾರಂಟಿ ಜಾರಿಗೆ ಒತ್ತಾಯಿಸಿ ವಿಧಾನಸೌಧದ ಎದುರು ಹೊರಕೆ ಧರಣಿ ನಡೆಸಲು ಯೋಜನೆ ಹಾಕಿದರೆ, ಬಿಜೆಪಿ ಶಾಸಕರು, ಎಂಎಲ್‍ಸಿಗಳು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಲು ತಮ್ಮ ಅಸ್ತ್ರಗಳನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.