ವಿಟ್ಲ: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮದ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲದ ಮಾಣಿಲ ತಿರುವೊಂದರಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಪಂಜ ನಿವಾಸಿ ಸುದರ್ಶನ್ (35) ಮೃತಪಟ್ಟ ಚಾಲಕ.
ಸುದರ್ಶನ್ ಹಾಗೂ ಇನ್ನೋರ್ವ ನಿನ್ನೆ ರಾತ್ರಿ ಮಾಣಿಲ ಬಾವಲಿಮೂಲೆಗೆ ಬರುತ್ತಿದ್ದ ವೇಳೆ ಆಟೋ ರಿಕ್ಷಾ ಪಲ್ಟಿಯಾಗಿದೆ. ಪರಿಣಾಮ ಗಂಘೀರ ಗಾಯಗೊಂಡ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ವ್ಯಕ್ತಿ ಅಲ್ಪಸ್ವಲ್ಪ ಗಾಯಗಳಾಗಿವೆ.
ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.