ಪುತ್ತೂರು: ಖ್ಯಾತ ಚಿನ್ನಾಭರಣಗಳ ಮಳಿಗೆ, ಸ್ವರ್ಣೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿ.ಎಲ್.ಜ್ಯುವೆಲ್ಲರ್ಸ್ ನ ಪುತ್ತೂರು ಮಳಿಗೆಯಲ್ಲಿ ಇಂದಿನಿಂದ (ಜೂ.26) ಕಿವಿಯೋಲೆ ಮತ್ತು ಉಂಗುರಗಳ ಹಬ್ಬ ಆಯೋಜಿಸಲಾಗಿದೆ.
ಕಳೆದ 66 ವರ್ಷಗಳಿಂದ ಜನಮಾನಸದಲ್ಲಿ ವಿಶ್ವಾಸ ಗಳಿಸಿರುವ ಜಿ.ಎಲ್.ಜ್ಯುವೆಲ್ಲರ್ಸ್ ಕರಾವಳಿ ಹಾಗೂ ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದು, ಇಂದಿನಿಂದ ಸೀಮಿತ ಅವಧಿ ವರೆಗೆ ಈ ಹಬ್ಬವನ್ನು ಆಯೋಜಿಸಿದೆ.
ಈ ವಿಶೇಷ ಮಾರಾಟ ಹಬ್ಬದಲ್ಲಿ ಆಕರ್ಷಕ ವಿನ್ಯಾಸದ ಉಂಗುಗಳು, ಕಿವಿಯೋಲೆಗಳು ಕನಿಷ್ಠ ಮೇಕಿಂಗ್ ದರದಲ್ಲಿ ಲಭ್ಯವಿದ್ದು, ಎಲ್ಲಾ ವಯೋಮಾನದ ಮಹಿಳೆಯರ, ಮಕ್ಕಳ ಹಾಗೂ ಪುರುಷರಿಗೆ ಒಪ್ಪುವ ವೈವಿಧ್ಯಮಯ ಚಿನ್ನದೊಡವೆಗಳ ಸಂಗ್ರಹ ಇಲ್ಲಿದೆ. ಅರ್ಧ ಗ್ರಾಂನಿಂದ ತೊಡಗಿ 32 ತೂಕದ ವರೆಗೆ ವಿವಿಧ ವಿನ್ಯಾಸಗಳ ಕಿವಿಯೋಲೆಗಳ ಸಂಗ್ರಹವಿದ್ದು, ಸ್ಥಳೀಯ ನುರಿತ ಕುಶಲಕರ್ಮಿಗಳಿಂದ ತಯಾರಿಸಿದ ಕಿವಿಯೋಲೆ ಜತೆಗೆ ಗಿಳಿಯೋಲೆ, ಚಾಂದ್ ಬಾಲಿ, ಕೊಲ್ಕತ್ತಾ, ರಾಜ್‍ಕೋಟ್, ಕಾರವಾರ ಮುಂತಾದ 2900 ಕ್ಕೂ ಮಿಕ್ಕಿ ಕಿವಿಯೋಲೆಗಳು ಹಾಗೂ 2500 ಕ್ಕೂ ಮಿಕ್ಕಿ ವಿವಿಧ ವಿನ್ಯಾಸದ ಉಂಗುರಗಳ ಸಂಗ್ರಹ ಗ್ರಾಹಕರ ಆಯ್ಕೆಗೆ ಲಭ್ಯವಿದೆ.
ಕಳೆದ ಮೇ ತಿಂಗಳಿನಲ್ಲಿ ಚಿನ್ನದ ದರ ಪ್ರತಿ ಗ್ರಾಂಗೆ 5720 ರೂ. ತನಕ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲಿ ಪ್ರತಿ ಗ್ರಾಪಂಗೆ 300 ರೂ. ರಷ್ಟು ಇಳಿಕೆಯಾಗಿದೆ. ದರ ಇಳಿಕೆಯ ಪ್ರಯೋಜನ ಗ್ರಾಹಕರು ಪಡೆಯುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.