ಮಂಗಳೂರು-ದುಬೈ ವಿಮಾನ ಯಾನ ದರ ಏರಿಕೆ | ರಜೆಯ ಸಮಯ ಬಳಕೆ ಮಾಡಿಕೊಂಡ ಇಂಡಿಯೋ ಮತ್ತು ಏರ್​ ಇಂಡಿಯಾ ಎಕ್ಸ್​ಪ್ರೆಸ್

ಮಂಗಳೂರು: ಮಂಗಳೂರು-ದುಬೈ ವಿಮಾನಯಾನ ದರ ಏರಿಕೆಯಾಗಿದ್ದು, ಈ ಮೂಲಕ ಕರಾವಳಿ ಭಾಗದಿಂದ ಉದ್ಯೋಗಕ್ಕೆಂದು ದುಬೈನಲ್ಲಿ ತೆರಳುವವರಿಗೆ ಶಾಕ್​ ಎದುರಾಗಿದೆ.

ಬಕ್ರೀದ್​ ರಜೆಯಲ್ಲಿ ಊರಿಗೆ ಮರಳಬೇಕು ಎಂದುಕೊಂಡಿರುವ ಮಧ್ಯಮವರ್ಗದ ಭಾರತೀಯರು ವಿಮಾನಯಾನದ ದರ ಕೇಳಿ ಸುಸ್ತಾಗಿದ್ದಾರೆ.

ದುಬೈನಲ್ಲಿ ಸೆಖೆ ವಿಪರೀತಗೊಳ್ಳುವ ಹಿನ್ನೆಲೆಯಲ್ಲಿ ಹಲವೆಡೆ ಬೇಸಿಗೆ ರಜೆ ಆರಂಭಗೊಂಡಿದೆ, ಅಲ್ಲದೇ ಬಕ್ರೀದ್​ ಹಬ್ಬ ಬೇರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಅನೇಕರು ವೆಕೇಷನ್​ನಲ್ಲಿ ಊರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಆದರೆ ಏಕಾಏಕಿ ಏರಿಕೆಗೊಂಡಿರುವ ವಿಮಾನಯಾನ ದರದಿಂದ ಊರಿಗೆ ಬರುವ ನಿರ್ಧಾರದಿಂದ ಹಿಂದೆ ಸರಿಯುವಂತಾಗಿದೆ.
ದುಬೈ ಮತ್ತು ಮಂಗಳೂರು ಮಾರ್ಗವಾಗಿ ಪ್ರಯಾಣಿಸುವ ಇಂಡಿಯೋ ಮತ್ತು ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಸಮಯ ಸಾಧಕನಂತೆ ಏರಿಕೆ ಮಾಡಿದೆ. ದುಬೈನಲ್ಲಿ ಬೇಸಿಗೆ ರಜೆ ನಡೆಯುತ್ತಿರೋದ್ರಿಂದ ಅನೇಕರು ಕುಟುಂಬ ಸಮೇತರಾಗಿ ಊರಿಗೆ ಮರಳುವವರೂ ಇದ್ದು, ಇದೇ ಸಮಯ ನೋಡಿಕೊಂಡು ಟಿಕೆಟ್​ ದರ ಏರಿಕೆ ಮಾಡಲಾಗಿದೆ.



































 
 


ಇಂಡಿಯೋ ವಿಮಾನಯಾನದ ಮೂಲಕ ಜೂನ್​ 25ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದವರ ಟಿಕೆಟ್​ ದರ 50582 ರೂಪಾಯಿ ಆಗಿದ್ದರೆ ಕೇವಲ ಒಂದೇ ದಿನಕ್ಕೆ ಈ ವಿಮಾನಯಾನದ ದರ 2000 ರೂಪಾಯಿ ಏರಿಕೆಗೊಂಡಿದೆ. ಇನ್ನು ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಜೂನ್​ 25ರಂದು 50,471 ರೂಪಾಯಿಟಿಕೆಟ್​ ದರ ವಿಧಿಸಿದ್ದರೆ ಇಂದು ಈ ದರದಲ್ಲಿ ಬರೋಬ್ಬರಿ 3000 ರೂಪಾಯಿ ಏರಿಕೆ ಮಾಡಿದೆ. ಕೇವಲ ಒಂದೇ ದಿನಕ್ಕೆ ಇಷ್ಟು ಸಾವಿರ ರೂಪಾಯಿ ವ್ಯತ್ಯಾಸವಾಗಿರೋದು ಎಲ್ಲರ ನಿದ್ದೆಗೆಡಿಸಿದೆ. ಒಂದು ಬಾರಿಗೆ ಊರಿಗೆ ಬಂದು ಹೋಗಲು ಓರ್ವ ವ್ಯಕ್ತಿ 1 ಲಕ್ಷಕ್ಕೂ ಅಧಿಕ ಹಣ ಕೇವಲ ವಿಮಾನದ ಟಿಕೆಟ್​ಗೆ ತೆರಬೇಕಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top