ಶ್ರದ್ಧಾಕೇಂದ್ರಗಳಿಂದ ಗ್ರಾಮದ ಅಭಿವೃದ್ಧಿ : ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ | ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ರಥ ಸಮರ್ಪಣೆ ಪ್ರಯುಕ್ತ ಸಮಾಲೋಚನಾ ಸಭೆ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಗೆ ರಥ ಸಮರ್ಪಣೆ ಪ್ರಯುಕ್ತ ಸಮಾಲೋಚನಾ ಸಭೆಯು ಜೂ.25 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಶ್ರದ್ಧಾ ಕೇಂದ್ರಗಳನ್ನು ಭಕ್ತಿ ಶ್ರದ್ಧೆಯಿಂದ ಬೆಳೆಸಬೇಕು.ಇದರಿಂದ ಗ್ರಾಮದಲ್ಲಿ ಶಾಂತಿ,ಸೌಹಾರ್ದತೆ  ನೆಲೆಸಲು ಸಾಧ್ಯ.ಬ್ರಹ್ಮರಥದ ನಿರ್ಮಾಣ ಕೆಲಸ ನಡೆಯುತ್ತಿದ್ದು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಕ್ಷೇತ್ರದ ಶಿಲ್ಪಿಗಳಾದ ಮಹೇಶ ಮುನಿಯಂಗಳ ಅವರು ರಥ ನಿರ್ಮಾಣದ ರೂಪುರೇಷೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.





































 
 

ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳು  ಉಪಸ್ಥಿತಿಯಲ್ಲಿಸಮಾಲೋಚನಾ ಸಭೆ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿಯವರು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ  ಮಾತನಾಡಿ, ರಥ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು ಸಾಗುವಾನಿ ಮರದ ಅವಶ್ಯಕತೆ ಇದೆ. ರಥ ನಿರ್ಮಾಣದಲ್ಲಿ ಎರಡು ಜಾತಿಯ ಮರಗಳನ್ನು ಬಳಸುತ್ತಿದ್ದು ಸಾಗುವಾನಿ ಮರ  1500 ಸೇಫ್ಟಿ ಮರ ಬೇಕಾಗಿದ್ದು ಈಗಾಗಲೇ 1200 ಸೇಫ್ಟಿ ಮರ ದಾನವಾಗಿ ಭಕ್ತಾದಿಗಳು ನೀಡಿದ್ದಾರೆ.300 ಸೇಫ್ಟಿ ಮರ ಬೇಕಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ಉಮೇಶ್ ಕೆಎಂಬಿ, ಮಂಜಪ್ಪ ರೈ, ಡಾ.ನರಸಿಂಹ ಶರ್ಮಾ ಕಾನಾವು, ಶ್ರೀರಾಮ ಪಾಟಾಜೆ, ಲಿಂಗಪ್ಪ‌ ಬೆಳ್ಳಾರೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ನಾರಾಯಣ ಕೊಂಡೆಪ್ಪಾಡಿ, ದಾಮೋದರ ನಾಯ್ಕ, ಪಿ.ಜಗನ್ನಾಥ ರೈ,ಯಶೋಧ ಎ.ಎಸ್. ಮೊದಲಾದವರು ಉಪಸ್ಥಿತರಿದ್ದರು.

ವಾಸುದೇವ ಪೆರುವಾಜೆ ಪ್ರಾರ್ಥಿಸಿ, ಪ್ರಾಂಶುಪಾಲ ಪದ್ಮನಾಭ ನೆಟ್ಟಾರು ಸ್ವಾಗತಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top