ಇಂಫಾಲ : ಮಹಿಳೆಯರ ಗುಂಪೊಂದು ಸೇನಾ ನೆಲೆಗೆ ಮುತ್ತಿಗೆ ಹಾಕಿ ಸೈನಿಕರ ಸೆರೆ ಹಿಡಿದಿದ್ದ 12 ಬಂಡುಕೋರರನ್ನು ಬಿಡಿಸಿಕೊಂಡು ಹೋದ ಘಟನೆ ಮಣಿಪುರದಲ್ಲಿ ನಡೆದಿದೆ.
ಪೂರ್ವ ಇಂಫಾಲದ ಇಥಾಮ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು 1200 ಕ್ಕೂ ಮಿಕ್ಕಿ ಮಹಿಳೆಯರ ಗುಂಪು ಸೇನಾ ಪಡೆಯನ್ನು ಸುತ್ತುವರಿದಿದ್ದು, ಬಂಡುಕೋರರನ್ನು ಬಿಡುವಂತೆ ಒತ್ತಾಯಿಸಿದೆ. ಹೆಚ್ಚಿನ ಅನಾಹುತ ತಪ್ಪಿಸಲು ಸೇವೆ ಅವರನ್ನು ಬಿಟ್ಟು ಕಳುಹಿಸಿದೆ ಎಂದು ಸೇನೆ ಟ್ವಿಟರ್ ಮೂಲಕ ತಿಳಿಸಿದೆ.
ಮೆಟಾಯಿ ಬಂಡುಕೋರರ ಗುಂಪಿಗೆ ಸೇರಿದ 12 ಮಂದಿನ್ನು ಸೇನಾ ಪಡೆದ ವಶಕ್ಕೆ ತೆಗೆದುಕೊಂಡಿತ್ತು. ಇವರೆಲ್ಲಾ ಕೆಂಗ್ಲೆ ಯಾವೋಲ್ ಕನ್ನಾ ಲುಪ್ ಗುಂಪಿಗೆ ಸೇರಿದವರಾಗಿದ್ದು, ಹಲವು ದಾಳಿಗಳಲ್ಲಿ ಭಾಗಿಯಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಬಂಡುಕೋರರನ್ನು ವಶಕ್ಕೆ ಪಡೆಯಲಾಗಿತ್ತು. ಗುಂಪಿನ ನಾಯಕ ಮೋಯಿರನ್ ಪ್ರಮುಖ ಆರೋಪಿಯಾಗಿದ್ದ.
ಮಹಿಳೆಯರು ಮುತ್ತಿಗೆ ಸಂದರ್ಭ ಉದ್ವಿಗ್ನ ಸ್ಥಿತಿಗೆ ಕಾರಣವಾಗಿತ್ತು. ಪರಿಸ್ಥಿತಿ ಹದಗೆಡುವ ಭಯದಿಂದ ಸೇನೆ ಬಿಡುಗಡೆಗೊಳಿಸಿತು.
ಈಗಾಗಲೇ ಮಣಿಪುರದಲ್ಲಿ ಮೀಸಲು ವಿಚಾರದಲ್ಲಿ ಆದಿವಾಸಿ ಪಂಗಂಡಗಳ ಆಕ್ರೋಶ ಭುಗಿಲೆದ್ದಿದ್ದು, ಸಾಕಷ್ಟು ಗಲಭೆಗಳಿಗೆ ಕಾರಣವಾಗಿತ್ತು. ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಆಸ್ತಿ ಪಾಸ್ತಿಯೂ ಹಾನಿಯಾಗಿತ್ತು. ಈ ಸಂದರ್ಭದಲ್ಲಿ ಸಚಿವ, ಶಾಸಕರ ಮನೆಗಳ ಮೇಲೂ ದಾಳಿಯಾಗಿತ್ತು.