ಮಂಗಳೂರು: ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಸಿಗಬೇಕೆಂದು ಸರ್ಕಾರ ಆರಂಭಿಸಿರುವ ಈ ಯೋಜನೆ ಆಘಾತಕಾರಿಯಾಗಿ ಪರಿಣಮಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅರಸಿನಮಕ್ಕಿ ಎಂಬಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದ್ದು, ರೆಖ್ಯ ಗ್ರಾಮದ ಎಂಜಿರ ಕಟ್ಟೆ ಎಂಬಲ್ಲಿ ಅಂಗನವಾಡಿ ಕೇಂದ್ರದಿಂದ ವಿತರಣೆ ಮಾಡಲಾಗಿದ್ದ ಮೊಟ್ಟೆಯನ್ನು ಬೇಯಿಸಿದಾಗ ಅದರ ಒಳಗೆ ರಕ್ತ ಹಾಗೂ ಕೋಳಿ ಮರಿ ಪತ್ತೆಯಾಗಿತ್ತು. ಕೋಳಿ ಮರಿ ಕೂಡ ಬೆಂದು ಹೋಗಿದ್ದು ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.
ಈ ವಿಚಾರ ಗ್ರಾಮಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಅಂಗನವಾಡಿ ಕೇಂದ್ರದಿಂದ ಮೊಟ್ಟೆಯನ್ನು ಪಡೆದುಕೊಂಡವರಿಗೆಲ್ಲ ಆತಂಕ ಉಂಟಾಗಿದೆ. ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಅಂಗನವಾಡಿ ಕಾರ್ಯಕರ್ತೆಯರು ಅಂತಹ ಕಳಪೆ ಗುಣಮಟ್ಟದ ಮೊಟ್ಟೆಯನ್ನು ನಾವು ನೀಡಿಯೇ ಇಲ್ಲ ಎಂದು ಸಬೂಬು ನೀಡಿದ್ದಾರೆ. ಆದರೆ ಮೊಟ್ಟೆಯೊಳಗೆ ಕೋಳಿ ಮರಿ ಕೂಡ ಬೆಂದಿರುವ ಫೋಟೋ ಕೂಡ ವೈರಲ್ ಆಗಿದ್ದು ಈ ಸಂಬಂಧ ಗ್ರಾಮ ಪಂಚಾಯತಿ ಸಭೆಯಲ್ಲಿ ಚರ್ಚಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.