ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಸಹಜ’ – ಮೂಲಿಕಾ ವನ ನಿರ್ಮಾಣ ಯೋಜನೆ |

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷೆ ಯೋಜನೆ ’ವಿವೇಕ ಸಂಜೀವಿನಿ’ಯ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಆಂದೋಲನ ಆಶಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಹಜ- ಮೂಲಿಕಾ ವನ ನಿರ್ಮಾಣ ಯೋಜನೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಪುತ್ತೂರು ಶ್ರೀ ದುರ್ಗಾ ಕ್ಲಿನಿಕ್ ನ ಆರ್ಯುವೇದಿಕ್ ವೈದ್ಯರಾದ ಡಾ|ಹರಿಕೃಷ್ಣ ಪಾಣಾಜೆ ಕಾರ್ಯಕ್ರಮ ಉದ್ಫಾಟಿಸಿ ಮಾತಾನಾಡಿ,  ’ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬಳಕೆಯ ಅರಿವು ಶಾಲಾ ದಿನಗಳಿಂದಲೇ ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ. ಈಗ ಬೆಳೆಸಿಕೊಳ್ಳುವ ಈ ರೀತಿಯ ಅಭ್ಯಾಸಗಳನ್ನು ನೀವು ಬದುಕಿನಲ್ಲಿ ಮುಂದುವರಿಸುವ ಅಗತ್ಯ ಪ್ರಯತ್ನ ಮಾಡಬೇಕು ಮತ್ತು ಸಹಜ- ಸರಳ ಪ್ರಾದೇಶಿಕ ಆಹಾರ ವಸ್ತುಗಳ ಬಗ್ಗೆ ಒಲವು ತೋರಿಸಬೇಕು’ ಎಂದರು.ಬಳಿಕ ಶಾಲಾ ಮೂಲಿಕಾ ವನ ನಿರ್ಮಾಣಕ್ಕೆ ಬೇವಿನ ಸಸಿ ನೆಟ್ಟು ಚಾಲನೆ ನೀಡಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ , ಆಡಳಿತ ಮಂಡಳಿ ಸದಸ್ಯೆ ವೀಣಾ ನಾಗೇಶ್ ತಂತ್ರಿ, ಮುಖ್ಯ ಶಿಕ್ಷಕಿ ನಳಿನಿ ಮಾತಾಜಿ ಉಪಸ್ಥಿತರಿದ್ದರು. ಸಹ-ಸಂಜೀವಿನಿಯ ಸಂಯೋಕಿಯರಾದ ಶ್ವೇತಾ, ಸ್ವಾತಿ, ವೀಣಾಸರಸ್ವತಿ ಮಾತಾಜಿ ಮಾಹಿತಿ ನೀಡಿದರು. ಸ್ವಾತಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top