ಪುತ್ತೂರು: ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಸ್ಪೀಕರ್ ಯು.ಟಿ.ಖಾದರ್ ಹಾಗೂ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಜೂ.24 ಶನಿವಾರ ಸಂಜೆ 4.30 ಕ್ಕೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ನಿರ್ದೇಶಕ ಸಿನಾನ್ ಪರ್ಲಡ್ಕ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ಒಕ್ಕೂ ಟದ ಪದಾಧಿಕಾರಿಗಳು ಸನ್ಮಾನ ನಡೆಸಲಿದ್ದು, ಈ ಸಂದರ್ಭದಲ್ಲಿ ಯಾವುದೇ ಮುಸ್ಲಿಂ ಸಂಘಟನೆಗಳಿಗೆ ಸನ್ಮಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಬಶೀರ್ ಅಹಮ್ಮದ್ ಉದ್ಘಾಟಿಸಲಿದ್ದು, ಮಂಜೇಶ್ವರ ಶಾಸಕ ಪಿ.ಕೆ.ಎಂ.ಅಶ್ರಫ್ ಸಹಿತ ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಇತರ ಸಚಿವರುಗಳು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದಿಕ್ ಸುಲ್ತಾನ್, ಶರೀಫ್ ಬಲ್ನಾಡು, ರಶೀದ್ ಮುರ ಉಪಸ್ಥಿತರಿದ್ದರು.