ಮಾಣಿಲ : ದೈಹಿಕ ಮಾನಸಿಕ ಸಮತೋಲನ ಕಾಪಾಡಲು ಯೋಗ ಅಗತ್ಯ. ಯೋಗ ವಿಶ್ವವ್ಯಾಪಿಯಾಗಿರುವುದು ನಮ್ಮ ಸುಯೋಗ – ಎಂದು ಪ್ರತಿಷ್ಠಿತ ಸಂಸ್ಥೆ ವಿಟ್ಲ ಜೆಸಿಐ ನ ಅಧ್ಯಕ್ಷರಾದ ಪರಮೇಶ್ವರ ಹೆಗಡೆ ಹೇಳಿದರು.
ಅವರು ‘ವಿಶ್ವ ಯೋಗ ದಿನ ‘ ಪ್ರಯುಕ್ತ ಸರ್ಕಾರಿ ಪ್ರೌಢ ಶಾಲೆ ಮಾಣಿಲ ದಲ್ಲಿ ಜೆಸಿಐ ವಿಟ್ಲ ಸಹಯೋಗದಲ್ಲಿ ಏರ್ಪಡಿಸಲಾದ ‘ಆರೋಗ್ಯ ಯೋಗ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್ ಡಿ ಎಂಸಿ ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಭುವನೇಶ್ವರ್ ಸಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ರಾಷ್ಟ್ರೀಯ ಮಟ್ಟದ ಯೋಗ ಸಾಧಕಿ ಕುಮಾರಿ ಶಾರದಾ ಯೋಗಾಸನ ಪ್ರಾತ್ಯಕ್ಷಿಕೆ ನೀಡಿ ಯೋಗದ ಮಹತ್ವ ವಿವರಿಸಿದರು.
ಮಾಣಿಲ ಗ್ರಾ.ಪಂ.ಅಧ್ಯಕ್ಷೆ ವನಿತಾ. ವಿಟ್ಲ ಜೆಸಿಐ ನ ಕಾರ್ಯದರ್ಶಿ ದೀಕ್ಷಿತ್, ಸದಸ್ಯ ರಜಿತ್ ಆಳ್ವ, ಎಸ್ ಡಿ ಎಂಸಿ ಸದಸ್ಯ ವಿಷ್ಣು ಕನ್ನಡಗುಳಿ ಭಾಗವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುಧೀಶ್ ವಂದಿಸಿದರು. ಶಾಲಾ ಶಿಕ್ಷಕ ವರ್ಗ, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಸಭಾಕಾರ್ಯಕ್ರಮಕ್ಕೂ ಮುನ್ನ ಶಾಲಾವರಣದಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಯೋಗಾಭ್ಯಾಸ ನಡೆಯಿತು.