ಜೂ.24 : ಕೊಳ್ತಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗ್ರಾಮ ಸಾಹಿತ್ಯ ಸಂಭ್ರಮ 6ನೇ ಸರಣಿ ಕಾರ್ಯಕ್ರಮ

ಪುತ್ತೂರು: ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ  ಘೋಷ ವಾಕ್ಯದಲ್ಲಿ ಪುತ್ತೂರು ತಾಲೂಕು  ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಹಾಗೂ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ, ಕೊಳ್ತಿಗೆ ಗ್ರಾಮ ಪಂಚಾಯತ್ ಸಹಕಾರದಲ್ಲಿ ಚಿಗುರೆಲೆ ಸಾಹಿತ್ಯ ಬಳಗದ ಸಂಚಾಲಕತ್ವದಲ್ಲಿ, ಗ್ರಾಮ ಸಾಹಿತ್ಯ ಸಂಭ್ರಮದ  ಆರನೇ ಸರಣಿ ಕಾರ್ಯಕ್ರಮವು  ಕೊಳ್ತಿಗೆ  ಗ್ರಾಮದ ಷಣ್ಮುಖ ದೇವ ಪ್ರೌಢಶಾಲೆಯಲ್ಲಿ ಜೂ. 24 ಶನಿವಾರ ನಡೆಯಲಿದೆ.

ಮಿತ್ರಂಪಾಡಿ  ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ  ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಷಣ್ಮುಖ ದೇವ ಪ್ರೌಢಶಾಲೆಯ ಅಧ್ಯಕ್ಷರಾದ  ಶ್ರೀ ತೀರ್ಥಾನಂದ ದುಗ್ಗಳ ನೆರವೇರಿಸಲಿದ್ದಾರೆ. ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಮ ಪಂಚಾಯತ್ ಪಿಡಿಒ ಸುನಿಲ್ ಎಚ್ ಟಿ, ಹಿರಿಯ ಕೃಷಿಕ ವಸಂತಕುಮಾರ್ ರೈ  ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಹಿರಿಯ ಸಾಹಿತಿಗಳಾದ ಎಸ್ ಜಿ ಕೃಷ್ಣ, ಗಣೇಶ್ ಭಟ್ ಮಾಪಲಮಜಲು, ಹಾ. ಮ. ಸತೀಶ್, ಪೂರ್ಣಿಮಾ ಪೆರ್ಲಂಪಾಡಿ, ಕುಂಟಿಕಾನ ಲಕ್ಷ್ಮಣ ಗೌಡ, ಉದಯಗೌರಿ ಭಿರ್ಮುಕಜೆ , ಯುವ ಗಾಯಕ ರವಿಪಾಂಬಾರು ಻ವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮಸುಂದರ್ ರೈ ಅಭಿನಂದಿಸಲಿದ್ದಾರೆ.



































 
 

ಸಾಹಿತ್ಯಕ್ಕೆ ಕೊಳ್ತಿಗೆ  ಗ್ರಾಮದ ಕೊಡುಗೆ ಎಂಬ ವಿಚಾರದಲ್ಲಿ ಉಪನ್ಯಾಸವನ್ನು ಸಾಹಿತ್ಯ ವಿಮರ್ಶಕ ಅಮಲ ಶಿವರಾಮ್ ಅವರು ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಳ್ತಿಗೆ ಗ್ರಾಮದ ಒಂಭತ್ತು ಶಾಲಾ ವಿದ್ಯಾರ್ಥಿಗಳಿಂದ  ಬಾಲಕವಿಗೋಷ್ಠಿ , ಬಾಲಕಥಾಗೋಷ್ಠಿ, ಯುವಕವಿ ಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ನಡೆಯುವ ವಿವಿಧ ನಾಲ್ಕು ಗೋಷ್ಠಿಗಳಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗವೇಣಿ, ಷಣ್ಮುಖ ದೇವ ಪ್ರೌಢಶಾಲೆಯ  ಸಂಚಾಲಕ ಶಿವರಾಮ್ ಭಟ್, ರತ್ನ. ಕೆ.ಭಟ್, ನೇಮಿರಾಜ್ ಪಾಂಬಾರು , ಪರಮೇಶ್ವರ ಗೌಡ ಮುಂತಾದವರು ಭಾಗಿಯಾಗಲಿದ್ದಾರೆ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top