ಪುತ್ತೂರು: ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಯೋಗ ಮಹತ್ತರ ಪಾತ್ರವನ್ನು ವಹಿಸಿದ್ದು, ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ವಿಶ್ವ ಯೋಗ ದಿನವನ್ನು ಜೂ.21 ರಂದು ಆಚರಿಸಲಾಗುತ್ತಿದೆ.
2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಆರಂಭವಾದ ಬಳಿಕ 2015, ಜೂ.21 ಎಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿ ಅಶೋಕ್ ಕುಮಾರ್ ಅವರು ಈ ವಿಚಾರವನ್ನು ಮಂಡಿಸಿದ್ದರು. ಇದು ಐತಿಹಾಸಿಕ ಕ್ಷಣವಾಗಿದ್ದು ಬಹುತೇಕ ರಾಷ್ಟ್ರಗಳಿಂದ ಬೆಂಬಲ ವ್ಯಕ್ತವಾಗಿದೆ.
ಋಷಿ ಮುನಿಗಳ ಕಾಲದಿಂದಲೂ ಯೋಗ ಪ್ರಚಲಿತದಲ್ಲಿದ್ದು, ಯೋಗ ಇಡೀ ಜಗತ್ತಿಗೆ ಭಾರತ ನೀಡಿದ ಮಹತ್ತರ ಕೊಡುಗೆಯಾಗಿದೆ. ಪ್ರಸ್ತುತ ಮೋದಿ ಪ್ರಧಾನಿಯಾದ ಮೇಲೆ ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಶಾಲಾ-ಕಾಲೇಜು, ಮಠ ಮಂದಿರಗಳಲ್ಲಿ ಆಚರಿಸುವ ಮೂಲಕ ಯೋಗ ಮತ್ತಷ್ಟು ಪುಷ್ಠಿಯನ್ನು ಪಡೆದುಕೊಂಡಿದೆ.
ಮುಖ್ಯವಾಗಿ ಯೋಗ ಮಾಡುವುದರಿಂದ ಮನುಷ್ಯನಲ್ಲಿರುವ ದೀರ್ಘ ಕಾಲ ನೋವಿಗೆ ಮುಕ್ತಿ ನೀಡಬಹುದು. ಅಲ್ಲದೆ ಒತ್ತಡ, ದೇಹದಲ್ಲಿರುವ ಉರಿಯೂತವನ್ನು ಕಡಿಮೆ ಮಾಡಬಹುದಾಗಿದೆ.
ಯೋಗ ದಿನಾಚರಣೆ ಜೂ.21 ರಂದು ಯಾಕೆ ?
ಜೂನ್. 21 ವರ್ಷದಲ್ಲಿ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಅಲ್ಲದೆ ಇದು ದಕ್ಷಿಣಯಾನಕ್ಕೆ ಪರಿವರ್ತನೆಯಾಗುವ ದಿನವಾಗಿದೆ. ಅದಲ್ಲದೆ ದಕ್ಷಿಣ ಯಾನ ಆಧ್ಯಾತ್ಮಿಕ ಅಭ್ಯಾಸಗಳಿಗೆ ಹೇಳಿ ಮಾಡಿಸಿದ್ದಾಗಿದ್ದು, ಈ ವಾಡಿಕೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ . ಜೊತೆಗೆ ಹಳೆ ಕಾಲದಿಂದಲೂ ಸಹ ಸೂರ್ಯಾಭಿಮುಖವಾಗಿ ದೃಷ್ಟಿ ಇಟ್ಟು ಯೋಗ ಮಾಡುವುದರಿಂದ ದಿವ್ಯ ಶಕ್ತಿ ಉದ್ದೀಪನಗೊಳಿಸುತ್ತದೆ ಎಂದು ನಂಬಲಾಗಿದೆ. ಯೋಗ ಮಾಡುವವರಿಗೆ ಅನೇಕ ಲಾಭ ನೀಡುವುದರ ಜೊತೆಗೆ ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಹಾಗಾಗಿ ಈ ದಿನವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.