ಪುತ್ತೂರು: ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ನರಿಮೊಗರು ಸರಸ್ವತಿ ವಿದ್ಯಾಮಂದಿರದ ಅವಿನಾಶ್ ಕೊಡೆಂಕಿರಿ ಮಾತನಾಡಿ, ಯೋಗವು ಜೀವನ ಶೈಲಿಯನ್ನು ರೂಪಿಸುವ ಪರಿಪೂರ್ಣ ವಿಧಾನ. ಅಷ್ಟಾಂಗ ಯೋಗವು ದೇಹ, ಮನಸು ಮತ್ತು ಬುದ್ಧಿ ಸಂಸ್ಕಾರದ ಜೊತೆಗೆ ಆಧ್ಯಾತ್ಮಿಕ ಉನ್ನತಿ ತಂದುಕೊಡುತ್ತದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಮಾತನಾಡಿ, ಜೀವನ ಶಿಸ್ತು ಅವಶ್ಯ. ಯೋಗ ಅದನ್ನು ನೀಡುತ್ತದೆ. ನಿತ್ಯ ಯೋಗಾಸನ ಮಾಡುವಂತೆ ತಿಳಿಸಿದರು.
ಶಾಲಾ ಆಡಳಿತ ಅಧಿಕಾರಿ ಶುಭಾ ಅವಿನಾಶ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ದಿವ್ಯಾ ಸ್ವಾಗತಿಸಿದರು. ಯೋಗ ಶಿಕ್ಷಕ ವಿಜೇತ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನ ಮಾಡಿದರು