ಪುತ್ತೂರು: ಯೋಗವು ಮನುಷ್ಯ ಮತ್ತು ಪ್ರಕೃತಿಯನ್ನು ಸೇರಿಸುವ, ಒಂದಾಗಿಸುವ ಒಂದು ಸಾಧನ.ಭೌತಿಕದಿಂದ ಅಭೌತಿಕದೆಡೆಗೆ ನಡೆಸುವ ಪಯಣಕ್ಕೆ ಈ ಯೋಗವೇ ಮಾರ್ಗದರ್ಶಕ. ಯೋಗದಲ್ಲಿ ಸಂಪೂರ್ಣತೆಯನ್ನು ಪಡೆದವರು ಬ್ರಹ್ಮಜ್ಞಾನವನ್ನು ಪಡೆಯುತ್ತಾರೆ.ಆಧ್ಯಾತ್ಮದ ಸೂಕ್ಷ್ಮ ಸತ್ಯವನ್ನು ಅರಿತುಕೊಳ್ಳುತ್ತಾರೆ.ಯೋಗವನ್ನು ಹಿಡಿದು ಪರಿಪೂರ್ಣತೆಯನ್ನು ಪಡೆಯುವವನೇ ಸಾಧಕನಾಗುತ್ತಾನೆ. ಎಂದು ಕೊಂಬೆಟ್ಟು ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕಿ ವಾರಿಜ ಹೇಳಿದರು.
ಅವರು ಬುಧವಾರ ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಆಸನಗಳೊಂದಿಗೆ ಯೋಗದ ಮಹತ್ವ ಎಂಬ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಸಕಾರಾತ್ಮಕ ಚಿಂತನೆಗಳಿಗೆ ಯೋಗ ಅನಿವಾರ್ಯ .ಶಿಸ್ತು ಬದ್ಧಜೀವನ ನಮ್ಮ ಸಮಾಜದ್ದಾಗಬೇಕಿದೆ. ಮನಸ್ಸನ್ನು ಕೇಂದ್ರೀಕರಿಸುವ ಯೋಗಕ್ಕೆ ಖಂಡಿತವಾಗಿಯೂ ಮನುಷ್ಯನನ್ನು ಬದಲಾಯಿಸುವ ಶಕ್ತಿ ಇದೆ. ಸಮಾಜದಲ್ಲಿ ಬದಲಾವಣೆತರುವ ಶಕ್ತಿ ಇದೆ.ಆರೋಗ್ಯಕರವಾಗಿರುವ , ಸಚ್ಚಾರಿತ್ರ್ಯವುಳ್ಳ ಒಳ್ಳೆಯ ಸಮಾಜದ ನಿರ್ಮಾಣಕ್ಕೆ ಯೋಗವೇ ದಿವ್ಯಔಷಧ.ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಯೋಗಾಸನದ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಪುತ್ತೂರು ನಗರ ಸಮಿತಿಯ ಯೋಗ ಶಿಕ್ಷಕಿ ರಶ್ಮಿ ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭೂಮಿಕಾ ಸ್ವಾಗತಿಸಿ, ವಂದಿಸಿದರು.