ಹಿರೆಬಂಡಾಡಿಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಹಿರೆಬಂಡಾಡಿ: ರಾಜ್ಯದ ಪ್ರತೀ ಮಹಿಳೆಯರಿಗೆ ಜಾತಿ, ಮತ, ಧರ್ಮಗಳ ವೆತ್ಯಾಸವಿಲ್ಲದೆ ಅವರವರು ನಂಬುವ ದೇವರ, ತೀರ್ಥ ಸ್ಥಳಗಳ ಯಾತ್ರೆಗೆ ಉಚತ ಬಸ್ ಮೂಲಕ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ಸ್ ನಿಜವಾದ ಹಿಂದುತ್ವ ಪಕ್ಷವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು

ಅವರು ಹಿರೆಬಂಡಾಡಿಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕರ ಅಸ್ತಿತ್ವಕ್ಕೆ ಬಂದ ಬಳಿಕ ಜನ ನೆಮ್ಮದಿಯಲ್ಲಿದ್ದಾರೆ. ಸರಕಾರದ ಐದು ಗ್ಯಾರಂಟಿ ಜನರನ್ನು ಸಂತೋಷದಿಂದ ಇರುವಂತೆ ಮಾಡಿದೆ. ಉಚಿತ ಸರಕಾರಿ ಬಸ್ ಯೋಜನೆಯಿಂದ ರಾಜ್ಯದ ಮಹಿಳೆಯರು ಸಂತುಷ್ಟರಾಗಿದ್ದು ಇಂದು ರಾಜ್ಯದ ಪ್ರತೀಯೊಂದು ದೇವಾಲಯ, ಮಸೀದಿ, ಚರ್ಚುಗಳು ಭಕ್ತರಿಂದ ತುಂಬು ತುಳುಕುತ್ತಿದೆ. ಮಹಿಳೆಯರಿಗೆ ದೇವರ ದರ್ಶನದ ಭಾಗ್ಯವನ್ನು ಕರುಣಿಸಿದಂತಾಗಿದೆ ಇದುವೇ ನಿಜವಾದ ಹಿಂದುತ್ವ, ಇನ್ನೊಬ್ಬರಿಗೆ ಅನ್ಯಾಯ ಮಾಡುವುದು, ಗಲಭೆ ಎಬ್ಬಿಸಿ ಜನರ ಮಧ್ಯೆ ವೈರತ್ವವನ್ನು ತರುವುದು ಹಿಂದುತ್ವವಲ್ಲ ಎಂದು ಹೇಳಿದರು.



































 
 

ಪಡಿತರ ಮೂಲಕ ತಲಾ ೫ ಕೆ ಜಿ ಕುಚ್ಚಲಕ್ಕಿಯನ್ನು ನಾವು ಕೊಡುತ್ತೇವೆ. ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿ ಬೇಡಿಕೆ ಇದ್ದು ಈ ಬಗ್ಗೆ ನಾನು ಸೀಎಂ ಜೊತೆ ಮಾತನಾಡಿದ್ದೇನೆ. ಕೆಲವು ತಿಂಗಳೊಳಗೆ ಈ ವ್ಯವಸ್ಥೆ ಆಗಲಿದೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದೆ, ಬಡವರ ಆಶೋತ್ತರಗಳನ್ನು ನಮ್ಮ ಸರಕಾರ ಖಂಡಿತವಾಗಿಯೂ ಈಡೇರಿಸಲಿದೆ. ಬಡವರ ಉಚಿತ ಭಾಗ್ಯವನ್ನು ವಿರೋಧಿಸುವವರು ವಿರೋಧಿಸುತ್ತಲೇ ಇರಲಿ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.

ನಾನಾಗಾಲಿ, ಕಾರ್ಯಕರ್ತರಾಗಲಿ ಹಗೆತನದ ರಾಜಕೀಯ ಮಾಡಬಾರದು. ಪಕ್ಷದ ಯೋಜನೆಗಳನ್ನು ಎಲ್ಲರಿಗೂ ನೀಡಿ. ನಮ್ಮ ಸೇವೆಯನ್ನು ಕಂಡು ಅವರು ನಮ್ಮೊಳಗೆ ಸೇರಿಕೊಳ್ಳುವಂತೆ ಪ್ರತೀಯೊಬ್ಬ ಕಾರ್ಯಕರ್ತನೂ ಕಾರ್ಯಪೃವೃತ್ತರಾಗಬೇಕು ಎಂದರು.

ರಾಜ್ಯದಲ್ಲಿ ಸುಭದ್ರ ಸರಕಾರ ಬಂದಿದೆ: ಡಾ. ರಾಜಾರಾಂ ಕೆ ಬಿ

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿ ರಾಜ್ಯದಲ್ಲಿ ಸುಭದ್ರ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ. ಪುತ್ತೂರು ಶಾಸಕರ ಕಾರ್ಯವೈಖರಿ ಚೆನ್ನಾಗಿದೆ. ಜನತೆಗೆ ಉಪಯೋಗವಾಗುವ ರೀತಿಯಲ್ಲಿ ಅವರು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಎಲ್ಲೆಡೆ ಶಾಸಕರ ಕಾರ್ಯಕ್ಕೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಪುತ್ತೂರು ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗಲಿದೆ ಎಂದು ಹೇಳಿದರು.

ಬಡವರ ಸೇವೆಯಿಂದ ಗೌರವ: ದೇವದಾಸ್

ಡಿಸಿಸಿ ಸದಸ್ಯ ದೇವದಾಸ್ ರೈ ಮಾತನಾಡಿ, 22 ಸಾವಿರ ಬಡ ಕುಟುಂಬಗಳಿಗೆ ಅಧಿಕಾರದಲ್ಲಿ ಇಲ್ಲದಾಗ ಅಶೋಕ್ ರೈ ನೆರವು ನೀಡಿದ್ದಾರೆ. ಈಗ ಶಾಸಕರಾಗಿದ್ದು ಬಡವರಿಗೆ ಇನ್ನು ಸಂತಸದ ದಿನಗಳು ಬರಲಿದೆ. ಬೂತ್ ಮತ್ತು ವಲಯ ಅಧ್ಯಕ್ಷರುಗಳಿಗೆ ಸ್ಥಾನವನ್ನು ನೀಡುವ ಮೂಲಕ ಶಾಸಕರು ಗ್ರಾಮ ಮಟ್ಟದಲ್ಲಿ ಪಕ್ಷ ಬೆಳೆಯಲು ಕಾರಣರಾಗುತ್ತಿದ್ದಾರೆ ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪ್ಪಿನಂಗಡಿ- ವಿಟ್ಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ ರೈ ಮಟಂತಬೆಟ್ಟು, ಹಿರೆಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವೀಂದ್ರ, ಕೋಡಿಂಬಾಡಿ ಗ್ರಾಪಂ ಸದಸ್ಯರೂ, ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶೌಕತ್ ಕೆಮ್ಮಾರ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,  ಕೆಪಿಸಿಸಿ ಸಂಯೋಜಕರಾದ ಕೃಷ್ಣ ರಾವ್,  ಕಾಂಗ್ರೆಸ್ ಮುಖಂಡರುಗಳಾದ ಸೇಸಪ್ಪ ನೆಕ್ಕಿಲು, ಉಮನಾಥ ರೈ, ಲೋಕೇಶ್ ಪೆಲತ್ತಡಿ ಮೊದಲಾದವರು ಉಪಸ್ತಿತರಿದ್ದರು.

ಗ್ರಾಪಂ ಸದಸ್ಯೆ ಗೀತಾದಾಸರಮೂಲೆ ಸ್ವಾಗತಿಸಿದರು.ಸೇಸಪ್ಪ ನೆಕ್ಕುಲು ವಂದಿಸಿದರು. ಸತೀಶ್ ಶೆಟ್ಟಿ ಎನ್ನಾಳ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಸಕರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top