ಪುತ್ತೂರು: ಪುತ್ತೂರಿನಲ್ಲಿ ದ ಕ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸುಮಾರು 60 ಕೋಟಿ ರೂ ವೆಚ್ಚದಲ್ಲಿ ಹಾಲು ಪ್ಯಾಕಿಂಗ್ ಘಟಕ (ಮಿನಿ ಡೈರಿ) ನಿರ್ಮಾಣ ಮಾಡುವ ಉದ್ದೇಶದಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಹಾಲು ಒಕ್ಕೂಟದ ಪದಾಧಿಕಾರಿಗಳ ಸಭೆ ಮಂಗಳವಾರ ನಡೆಯಿತು.
ಪುತ್ತೂರಿನಲ್ಲಿಯೇ ಸುಮಾರು 15 _ಎಕ್ರೆ ಜಾಗದಲ್ಲಿ ಈ ಘಟಕ ನಿರ್ಮಾಣವಾಗಲಿದೆ. ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಜಾಗವನ್ನು ಗುರುತಿಸಲಾಗಿದ್ದು ಜಾಗವನ್ನು ಪರಿಶೀಲಿಸುವಂತೆ ಒಕ್ಕೂಟಕ್ಕೆ ಶಾಸಕರು ಸೂಚನೆ ನೀಡಿದರು. ಘಟಕ ಆರಂಭವಾದಲ್ಲಿ ಪುತ್ತೂರಿನ ಸುಮಾರು ಸಾವಿರ ಜನರಿಗೆ ಉದ್ಯೋಗವೂ ಲಭಿಸಲಿದೆ. ಪುತ್ತೂರಿನಲ್ಲಿ ವಿವಿಧ ಕೈಗಾರಿಕಾ ಘಟಕವನ್ನು ಪ್ರಾರಂಭಿಸಲು ಶಾಸಕರು ಉತ್ಸುಕರಾಗಿದ್ದು ಇದರಿಂದ ಸ್ಥಳೀಯ ರಿಗೆ ಉದ್ಯೋಗದ ಜೊತೆಗೆ ಪುತ್ತೂರಿನ ಅಭಿವೃದ್ದಿಗೂ ಪೂರಕವಾಗುತ್ತದೆ ಎಂದು ಶಾಸಕರು ಹೇಳಿದರು.
ಸಭೆಯಲ್ಲಿ ಸಹಾಯಕ ಕಮಿಷನರ್ ಗಿರೀಶ್ ನಂದನ್, ,ತಹಶಿಲ್ದಾರ್ ಶಿವಶಂಕರ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಎಸ್ ಬಿ ಜಯರಾಮ ರೈ, ನಿರ್ದೆಶಕ ನಾರಾಯಣ ಪ್ರಕಾಶ್, ಸುಧಾಕರ್ ರೈ, ಮೆನೆಜರ್ ರವಿರಾಜ್ ಉಡುಪ, ಸಹಾಯಕ ವ್ಯವಸ್ಥಾಪಕರಾದ ಡಾ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.