ಪ್ರಸ್ತುತ ವರ್ಷದಲ್ಲಿ ತಾಲೂಕಿನಲ್ಲಿ 6 ಮಂದಿಯಲ್ಲಿ ಕುಷ್ಠರೋಗ ಲಕ್ಷಣ ಪತ್ತೆ | ಕುಷ್ಠರೋಗ ನಿವಾರಣಾ ಜಾಗೃತ ಸಮಿತಿ ಸಭೆಯಲ್ಲಿ ಮಾಹಿತಿ

ಪುತ್ತೂರು: ಪುತ್ತೂರಿನಲ್ಲಿ2021 ರಲ್ಲಿ 2 ಕುಷ್ಠರೋಗ ಪ್ರಕರಣ ಕಂಡು ಬಂದಿದ್ದು, ಈ ವರ್ಷ ಆರು ಪ್ರಕರಣಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಜೂ.19 ರಿಂದ ಜು.6 ರ  ತನಕ ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಅಭಿಯಾನ ಯೋಜನೆಯಡಿ ಮನೆ ಮನೆ ಭೇಟಿ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದ್ದಾರೆ.

ಅವರು ಸೋಮವಾರ ತಾಲೂಕು ಆಡಳಿತ ಸೌಧದ ಸಹಾಯಕ ಕಮೀಷನರ್ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕುಷ್ಠರೋಗ ನಿವಾರಣಾ ಜಾಗೃತ ಸಮಿತಿ ಸಭೆಯಲ್ಲಿ ಮತನಾಡಿದರು.

ಪ್ರಸ್ತುತ ವರ್ಷದಲ್ಲಿ ಕುಷ್ಠರೋಗಿಗಳಲ್ಲಿ ಏರಿಕೆ ಕಂಡಿದ್ದು, 6 ಮಂದಿ ಪೈಕಿ ಮೂರು ಮಂದಿ ಗುಣಮುಖರಾಗಿದ್ದಾರೆ. ಉಳಿದ ಮೂರು ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. ಕುಷ್ಠ ರೋಗದ ನಿವಾರಣೆಗೆ ಆಶಾ ಕಾರ್ಯಕರ್ತರು, ಸ್ವಯಂ ಸೇವಕರಿಂದ ಮನೆ ಮನೆ ಭೇಟಿ ನಡೆಯಲಿದೆ ಎಂದು ತಿಳಿಸಿದರು.































 
 

ತಾಲೂಕಿನ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಎರಡು, ಕೊಯಿಲ ಪ್ರಾಥಮಿಕ ಾರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಓರ್ವನಲ್ಲಿ ಕುಷ್ಠರೋಗ ಲಕ್ಷಣಗಳು ಕಂಡು ಬಂದಿದೆ. ಈ ಮೂವರಿಗೂ ಚಿಕಿತ್ಸೆ ನೀಡಲಾಗುವುತ್ತಿದೆ. ಈ ನಿಟ್ಟಿನಲ್ಲಿ ಮನೆ ಭೇಟಿ ನೀಡುವ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ಮನೆ ಮಂದಿ ಸಹಕರಿಸಬೇಕು ಎಂದು ಅವರು ತಿಳಿಸಿದರು. ಶಾಲಾ ಕಾಲೇಜುಗಳಲ್ಲಿ ಕುಷ್ಠರೋಗದ ಕುರಿತು ಮಾಹಿತಿ ಅರಿವು ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ಹೇಳಿದರು.

ಸಹಾಯಕ ಆಯುಕ್ತ ಗಿರೀಶ್ ನಂದನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಾದ್ಯಂತ ನಡೆಯುವ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರುಗಳು ಸೇರಿಕೊಳ್ಳಬೇಕು. ಮನೆ ಭೇಟಿ ಕುರಿತು ಮೊದಲೇ ತಿಳಿಸಬೇಕು.. ಜನರನ್ನು ಮನೆವೊಲಿಸಿ ರೋಗ ಲಕ್ಷಣ ಪತ್ತೆ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಕೆ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುಂದರ ಗೌಡ, ಡಾ.ಭವ್ಯಾ, ಡಾ.ಶಿಶಿರ, ಡಾ.ಕೃಷ್ಣಾನಂದ, ಡಾ.ನರಸಿಂಹ ಕಾನಾವು, ಡಾ.ಬದರಿನಾಥ್, ಡಾ.ಸಚಿನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ಆರೋಗ್ಯ ನಿರೀಕ್ಷಕಿ ಪದ್ಮಾವತಿ ಸ್ವಾಗತಿಸಿ, ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top