ಪುತ್ತೂರು: ನಾನು 20 ವರ್ಷ ಬಿಜೆಪಿಯಲ್ಲಿ ಸಕ್ರೀಯನಾಗಿದ್ದೆ, ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಕೇಳಿದ್ದೆ ಬಿಜೆಪಿಯಲ್ಲಿ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಸೇರಿದೆ, ಅವಕಾಶ ಸಿಕ್ಕಿತ್ತು, ಸ್ಪರ್ದೆ ಮಾಡಿದೆ, ಗೆದ್ದೆ , ಶಾಸಕನಾದೆ. ನಾನು ಹಣ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ, ಬಡವರ ಸೇವೆ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ರಾಜಕೀಯ ಸೇರಿದೆ. ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ ದೆವಸ್ಥಾನದ ಸಭಾಂಗಣದಲ್ಲಿ ಶಾಸಕರಿಗೆ ಗ್ರಾಮಸ್ಥರು ಆಯೋಜಿಸಿದ ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹುಟ್ಟೂರಿನ ಗ್ರಾಮಸ್ಥರು ಸಹಕಾರ ನಾನು ನಂಬುವ ತಾಯಿ ಮಹಿಷ ಮರ್ಧಿನಿಯ ಆಶೀರ್ವಾದದಿಂದ ನಾನು ಇಂದು ಪುತ್ತೂರು ಕ್ಷೇತ್ರದ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಮೇಲೆ ನನಗೆ ಋಣ ಇದೆ ಅದನ್ನು ತೀರಿಸುವ ಕೆಲಸವನ್ನು ಮಾಡುತ್ತೇನೆ ಮತ್ತು ಕೋಡಿಂಬಾಡಿ ಗ್ರಾಮದ ಜನತೆ ತಲೆತಗ್ಗಿಸುವ ಕೆಲಸವನ್ನು ಎಂದಿಗೂ ಮಾಡಲಾರೆ ಎಂದು ರೈ ಹೇಳಿದರು.
ತಳಮಟ್ಟದ ಕೆಲವು ಇಲಾಖಾ ಅಧಿಕಾರಿಗಳು ಜನರನ್ನು ಪೀಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದ್ದು ಅಂಥವರಿಗೆ ಇಂಜೆಕ್ಷನ್ ಕೊಡಿಸುವ ಕೆಲಸವನ್ನು ಮಾಡಲಿದ್ದೇನೆ ಎಂದು ಹೇಳಿದರು.
ಕೋಡಿಂಬಾಡಿ ಮಹಿಷ ಮರ್ಧಿನಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು ಮಾತನಾಡಿ, ಶಾಸಕ ಅಶೋಕ್ ರೈ ಪುತ್ತೂರಿನ ದ್ರುವತಾರೆಯಾಗಿದ್ದಾರೆ. ಇಡೀ ಆಯುಷ್ಯವನ್ನೇ ಬಡವರಿಗಾಗಿ ಮುಡಿಪಾಗಿಟ್ಟ ಅಶೋಕ್ ರೈ ಕ್ಷೇತ್ರದ ಶಾಸಕರಾಗಿರುವುದು ನಮ್ಮೆಲ್ಲರ ಭಾಗ್ಯ ಎಂದೇ ಹೇಳಿದರು.
ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್,
ಕಾಂಗ್ರೆಸ್ ಮುಖಂಡ ಡಾ. ರಘು ಮಾತನಾಡಿದರು. ಬ್ರಹ್ಮಕಲಸೋತ್ಸವ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೋಡಿಂಬಾಡಿ ಗ್ರಾಮಪಂಚಾಯತ್ ಸದಸ್ಯರುಗಳಾದ ಜಯಪ್ರಕಾಶ್ ಬದಿನಾರ್, ಮಲ್ಲಿಕಾ ಅಶೋಕ್ ಪೂಜಾರಿ, ಪೂರ್ಣಿಮಾ ಯತೀಶ್ ಶೆಟ್ಟಿ, ಗೀತಾ ಬಾಬು ಮೊಗೇರ, ವಿಶ್ವನಾಥ ಕೃಷ್ಣಗಿರಿ, ಕೋಡಿಂಬಾಡಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶೇಖರ ಪೂಜಾರಿ, ಜೇಡರ ಪಾಲು,ಮೋನಪ್ಪ ಗೌಡ ಉಪಸ್ಥಿತರಿದ್ದರು. ಸಂತೋಷ್ ರೈ ಕೆದಿಕಂಡೆಗುತ್ತು ಸ್ವಾಗತಿಸಿದರು. ಜಯಪ್ರಕಾಶ್ ಬದಿನಾರ್ ವಂದಿಸಿದರು.ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರ್ವಹಿಸಿದರು.