ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕಿನ ಎಲ್ಲಾ ಸೇವಾ ಪ್ರತಿನಿಧಿಗಳು ಮತ್ತು ಮೇಲ್ವಿಚಾರಕರ ವಿಶೇಷ ಪ್ರೇರಣೆ, ಮಾರ್ಗದರ್ಶನ ಸಭೆಯನ್ನು ಪುತ್ತೂರಿನ ಯೋಜನಾ ಕಚೇರಿಯಲ್ಲಿ ಆಯೋಜಿಸಲಾಯಿತು..
ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಸಭೆಯನ್ನು ಉದ್ಘಾಟಿಸಿ, ಮಾತನಾಡಿ, ಹೆಗ್ಗಡೆ ಮನೆಯಲ್ಲಿ ಸಾಮಾನ್ಯ ಸೇವಕನಾಗಿ ಸೇರಿಕೊಂಡ ಅಣ್ಣಪ್ಪ ಸ್ವಾಮಿಯ ಮಹಿಮೆಯಿಂದ ಧರ್ಮಸ್ಥಳ ಇಂದು ವಿಶ್ವ ವಿಖ್ಯಾತಿಯನ್ನು ಪಡೆದ ಕ್ಷೇತ್ರವಾಗಿದೆ .ನಮಗೆ ಅಂತರ್ಶಕ್ತಿಯನ್ನು ತೋರಿಸುವ ದೊಡ್ಡ ವೇದಿಕೆ ಕ್ಷೇತ್ರದ ಸೇವೆ ನೀಡುವ ಅವಕಾಶ ಸಿಕ್ಕಿದೆ ಎಂದರು.
ಸಂಘ ಮಾಡಿದೆವು ದಾಖಲಾತಿ ನೀಡಿದೆವು ತರಬೇತಿ ಕೊಟ್ಟೆವು ಆದರೆ ಸಾಲ ನೀಡುವಲ್ಲಿ ಸೋಮಾರಿತನ ಮಾಡಿದೆವು. ನಾವು ಮಾಡಿದ ಸಂಘಕ್ಕೆ ಬೇರೆಯವರು ಬಂದು ಸುಲಭವಾಗಿ ಸಾಲ ನೀಡಿದರು ಇದರಿಂದ ನಮ್ಮ ಅವರ ಬಾಕಿ ಸಾಲ 19,000 ಕೋಟಿ. ಬೇರೆ ಮೈಕ್ರೋ ಫೈನಾನ್ಸ್ ಗಳು 40,000 ಕೋಟಿ ಆಗಿದೆ. ಇದನ್ನು ಮನಗಂಡ ಪೂಜ್ಯರು ಇವತ್ತು ತಂತ್ರಜ್ಞಾನದ ಮೂಲಕ ನಮ್ಮನ್ನು ಯಂತ್ರದ ಮೂಲಕ ಕೆಲಸ ಮಾಡಿಸುವಂತ ವ್ಯವಸ್ಥೆಯನ್ನು ಜಾರಿಗೆ ತಂದರು. ಸೇವಾ ಪ್ರತಿನಿಧಿಗಳಿಗೆ ನಾನು ಗುರಿಯನ್ನು ನೀಡುವುದಿಲ್ಲ ಆದರೆ ಸುಲಭ ಗುರಿ ನೀವೆಲ್ಲರೂ ಮುಂದಿನ ತಿಂಗಳಲ್ಲಿ 15 ಸಾವಿರದ ಗೌರವಧನ ಪಡೆಯುವಂತಾಗಬೇಕು ಇದೇ ನನ್ನ ಗುರಿ. ಇದು ಎಲ್ಲರಿಂದಲೂ ಸಾಧ್ಯ ಇದನ್ನು ಮಾಡಿ ತೋರಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರು ಪ್ರವೀಣ್, ಎಲ್ಐಸಿಯ ದಿನೇಶ್ ಯೋಜನಾಧಿಕಾರಿ ಶಶಿಧರ ಯಂ. ಉಪಸ್ಥಿತರಿದ್ದರು.