ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬನ್ನೂರ್ ವಲಯದ ಬೆಳ್ಳಿಪ್ಪಾಡಿ ಕುಮಾರಧಾರ ಶೌರ್ಯ ವಿಪತ್ತು ತಂಡದ ಮಾಸಿಕ ಸಭೆ ಕೊಡಿಮರ ಅಂಗನವಾಡಿ ಯಲ್ಲಿ ನಡೆಯಿತು.
ಸಭೆಯಲ್ಲಿ ಇದುವರೆಗೆ ಮಾಡಿದ ಕೆಲಸ ಕಾರ್ಯದ ಬಗ್ಗೆ ಹಾಗೂ ಮುಂದೆ ನಡೆಸುವ ಶ್ರಮದಾನದ ಬಗ್ಗೆ ಚರ್ಚಿಸಲಾಯಿತು.
ವಲಯದ ಮೇಲ್ವಿಚಾರಕಿ ಸುನೀತ ಶೆಟ್ಟಿ, ಘಟಕ ದ ಪ್ರತಿನಿಧಿ ಮಮತಾ ಉಪಸ್ಥಿತರಿದ್ದರು ಜಯಪ್ರಕಾಶ್ ಗೌಡ ಸ್ವಾಗತಿಸಿ ಗಣೇಶ್ ವಂದಿಸಿದರು.