ಪುತ್ತೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು, ರೋಟರಿ ಕ್ಯಾಂಪ್ಕೊ ರಕ್ತ ನಿಧಿ ಪುತ್ತೂರು ಸಹಯೋಗದಲ್ಲಿ ರೋಟರಿ ಕ್ಲಬ್ ಪುತ್ತೂರು ಹಾಗೂ ಸ್ವಯಂ ಪ್ರೇರಿತ ನಿಯಮಿತ ದಾನಿಗಳ ಸಹಕಾರದೊಂದಿಗೆ ಜಾಗತಿಕ ರಕ್ತದಾನಿಗಳ ದಿನದ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ ಭಾನುವಾರ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ನಲ್ಲಿ ನಡೆಯಿತು.
ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ ಸಿದ್ದೀಕ್ ಜಲಾಲಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಇಂದು ಮಾಡುವ ಒಳ್ಳೆಯ ಕೆಲಸದ ಪ್ರತಿಫಲದಿಂದ ನಮ್ಮ ಮಕ್ಕಳು, ಕುಟುಂಬಸ್ಥರಿಗೆ ಪುಣ್ಯ ಸಿಗುತ್ತದೆ. ರಾಜಕೀಯ, ಪಕ್ಷ, ಜಾತಿ, ಭೇದವಿಲ್ಲದೆ ಅಗತ್ಯ ಸಮಯದಲ್ಲಿ ಎಲ್ಲರಿಗೂ ಉಪಯೋಗವಾಗುವಂತಹ ರಕ್ತವನ್ನು ನಾವು ದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಅವರು ತಿಳಿಸಿದರು
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಜಲಾಲಿ ಉಸ್ತಾದ್ ಹಾಗೂ ಮ್ಯಾದೇ ದೇವುಸ್ ಚರ್ಚ್ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್ ರವರ ದಿವ್ಯ ಹಸ್ತದಿಂದ ಹೂವಿನ ಗಿಡಕ್ಕೆ ನೀರೆರೆದರು.
ಮುಖ್ಯ ಅತಿಥಿಗಳಾಗಿ ಎಸ್ ಡಿ ಪಿಐ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ, ಪುತ್ತೂರು ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಶುಭಹಾರೈಸಿದರು. ಪ್ಯಾಟ್ರಿಕ್ ಸಿಪ್ರಿಯಸ್ ಮಸ್ಕರೇನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಶೆಟ್ಟಿ, ಶ್ರೀ ಪ್ರಸಾದ್ ಪಾಣಾಜೆ, ಫಾರೂಕ್ ಬಾಯಬೆ, ಸಿದ್ದೀಕ್ ಪುತ್ತೂರು, ಡಾ.ರಾಮಚಂದ್ರ ಭಟ್, ಗಣೇಶ್ ಭಟ್, ಶರೀಫ್ ಸವಣೂರು, ಇಜಾಝ್ ಪರ್ಲಡ್ಕ, ಆರಿಫ್ ಸಾಲ್ಮರ, ಅಭಿಷೇಕ್ ಬೆಳ್ಳಿಪ್ಪಾಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ರಕ್ತದಾನ ಮಾಡಿಸುತ್ತಿರುವ ಹತ್ತಕ್ಕೂ ಅಧಿಕ ಮಂದಿಯ ಸೇವೆಯನ್ನು ಗುರುತಿಸಿ ಕಿರು ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಅಝೀಝ್ ಕೆಮ್ಮಾಯಿ ಸ್ವಾಗತಿಸಿ, ವಂದಿಸಿದರು. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.