ಪುತ್ತೂರು ವಿವಿಧ ಬಂಟರ ಸಂಘದ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈಗೆ ಅಭಿನಂದನೆ

ಪುತ್ತೂರು: ಇಂದು ವಿವಿಧ ಬಂಟರ ಸಂಘದ ವತಿಯಿಂದ ನಡೆದ ಅಭಿನಂದನೆ ಇತರ ಸಮಾಜದ ಜತೆ ಬಂಟ ಸಮಾಜದ ಜವಾಬ್ದಾರಿಯೂ ಜಾಸ್ತಿಯಾಗಿದೆ. ಹೀಗೆಂದು ಹೇಳಿದರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಅವರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಮಾರ್ಗದರ್ಶನದಲ್ಲಿ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘಗಳ ಸಹಯೋಗದೊಂದಿಗೆ ಬಂಟರ ಭವನದಲ್ಲಿ ಭಾನುವಾರ ನಡೆದ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಇಂದು ನಾನು ಶಾಸಕನಾಗಲು  ಬಂಟ ಸಮುದಾಯ ಸಂಪೂರ್ಣ ಆಶೀರ್ವಾದ ನನಗೆ ದೊಕಿದ್ದು, ಇತರ ಸಮುದಾಯದವರಿಗೆ ಸ್ಪಂದನೆ ನೀಡುವ ಜತೆಗೆ ಒಂದಲ್ಲಾ ಒಂದು ದಿನ ಬಂಟ ಸಮುದಾಯವನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತೇನೆ. ಈ ನಿಟ್ಟಿನಲ್ಲಿ ಸರಕಾರದಿಂದ ಬರುವ ಅನುದಾನವನ್ನು ಪ್ರಾಮಾಣಿಕವಾಗಿ ಬಳಸಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.



































 
 

ಶಾಸಕರನ್ನು ಅಭಿನಂದಿಸಿದ ಮಾತನಾಡಿದ ಮಂಗಳೂರು ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಕುಮಾರ್ ರೈ ಮಾಲಾಡಿ, ಶಾಸಕರಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಬಂಟ ಸಮುದಾಯದಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕಾನೂನು, ನ್ಯಾಯದ ಚೌಕಟ್ಟಿನಲ್ಲಿ ಶಾಸಕರು ಕೆಲಸ ಮಾಡಬೇಕಿದ್ದು, ಇತರ ಸಮಾಜದವರ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ಬಂಟ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಬೇಕೆಂದು ವಿನಂತಿಸಿದರು.

ಅಭಿನಂದನ ಮಾತುಗಳನ್ನಾಡಿದ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸಾಮಾಜಿಕ,ಅಭಿವೃದ್ಧಿ ನೆಲೆಯಲ್ಲಿ ಸಹಾಯ ಮಾಡುವ ಚಿಂತನೆಯುಳ್ಳ ಆಡಳಿತಾರೂಢ ಪಕ್ಷದ, ಎರಡೂ ಜಿಲ್ಲೆಗಳ ಏಕೈಕ ಶಾಸಕ ಅಶೋಕ್ ಕುಮಾರ್ ರೈ ಎಂದು ಹೇಳಿದರು.

ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ವಿದ್ಯಾರ್ಥಿ ವೇತನ ವಿತರಿಸಿ ಶುಭ ಹಾರೈಸಿದರು. ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಯನ್.ಜಗನ್ನಾಥ ರೈ ಮಾದೋಡಿ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ., ನಿಟಕಪೂರ್ವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ಭಂಡಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಸಕ ಅಶೋಕು್ ಕುಮಾರ್ ರೈ, ಪತ್ನಿ ಸುಮಾ ಎಸ್. ರೈ ಹಾಗೂ ಇಬ್ಬರು ಪುತ್ರಿಯರು, ಓರ್ವ ಪುತ್ರರ ಜತೆಯಾಗಿ ಶಾಲು ಹೊದಿಸಿ, ಫಲಪುಷ್ಪ ನೀಡಿ, 5.6 ಫೀಟ್ ಎತ್ತರದ ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಬಂಟ ಸಮಾಜದಿಂದ ಅತೀ ಹೆಚ್ಚು ಅಂಕ ಪಡೆದವರನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ನೀಡಲಾಯಿತು. ಜು.21 ರಂದು ಪುತ್ತೂರಿನಲ್ಲಿ ನಡೆಯುವ ತುಳುವರ ಬಂಟರ ಪರ್ಬ-2023 ಲೋಗೋವನ್ನು ಶಾಸಕ ಅಶೋಕ್ ಕುಮಾರ್ ರೈ ಅನಾವರಣಗೊಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ ಅಭಿನಂದನಾ ಪತ್ರ ವಾಚಿಸಿದರು. ರೂಪರೇಖಾ ಆಳ್ವ ಪ್ರತಿಭಾ ಪುರಸ್ಕಾರ ಪಟ್ಟಿ ವಾಚಿಸಿದರು. ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ನಿರಂಜನ ರೈ ಮಠಂತಬೆಟ್ಟು, ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ಅಭಿನಂದನಾ ಸಮಾರಂಭದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top