ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ಲಂಚ ಸ್ವೀಕಾರ ವರದಿ ಪ್ರಕಟ : ಹೊರಗುತ್ತಿಗೆ ನೌಕರರಿಂದ ಮುಷ್ಕರ

ಪುತ್ತೂರು: ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಲಂಚ ಕೇಳುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಸರಕಾರಿ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿಗಳು ಶನಿವಾರ ದಿಢೀರ್ ಮರಣೋತ್ತರ ಪರೀಕ್ಷೆ ನಡೆಸುವುದಿಲ್ಲ ಮುಷ್ಕರ ನಡೆಸಿರುವ ಘಟನೆ ನಡೆದಿದೆ.

ಮುಷ್ಕರದ ಪರಿಣಾಮ ಮರಣೋತ್ತರ ಪರೀಕ್ಷೆಗೆ ಬಂದ ಉಪ್ಪಿನಂಗಡಿ ಹಾಗೂ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎರಡು ಶವಗಳು ಮೂರು ಗಂಟೆಗೂ ಅಧಿಕ ಕಾಲ ಶವಾಗಾರದಲ್ಲಿ ಶವ ಪರೀಕ್ಷೆಗಾಗಿ ಕಾಯುವ ಪರಿಸ್ಥಿತಿ ಉಂಟಾಯಿತು.

ಮೃತಪಟ್ಟವರ ಕುಟುಂಬಸ್ಥರು ಸೇರಿದಂತೆ ಆಪ್ತರಿಗೆ ಈ ಘಟನೆ ನೋವು ತಂದಿದ್ದರ ಜತೆಗೆ ಶವ ಪರೀಕ್ಷೆಗಾಗಿ ಕಾಯುವ ಪರಿಸ್ಥಿತಿ ಎದುರಾಗಿದ್ದು ಆಕ್ರೋಶ ವ್ಯಕ್ತಡಿಸುವಂತಾಯಿತು.































 
 

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ಕುಮಾರ್ ಹಾಗೂ ಡಾ.ಯತಿರಾಜ್ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಗುತ್ತಿಗೆ ನೌಕರರಲ್ಲಿ ಮಾತುಕತೆ ನಡೆಸಿ ಮುಷ್ಕರ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಎರಡೂ ಶವಗಳ ಮರಣೋತ್ತರ ನಡೆಸಿ ಕುಟುಂದವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೊರಗುತ್ತಿಗೆ ನೌಕರ ಸುಧಾಕರ್, ನಾವು ಲಂಚ ಕೇಳುತ್ತೇವೆ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ. ನಾವು ಯಾರಲ್ಲೂ ಲಂಚ ಕೇಳುವುದಿಲ್ಲ. ಅವರಾಗಿಯೇ ಕೊಟ್ಟಾಗ ಪಡೆದುಕೊಂಡಿದ್ದೇವೆ ಹೊರತು ಬೇಡಿಕೆಯಿಟ್ಟಿಲ್ಲ. ನಮಗೆ ಸಂಭಾವನೆ ತೀರಾ ಕಡಿಮೆ, ರಾತ್ರಿ, ಹಗಲೆನ್ನದೆ ಶವಗಳನ್ನು ಪೋಸ್ಟ್ ಮಾರ್ಟಂ ಮಾಡುವ ಮೂಲಕ ನಿಷ್ಠೆಯಿಂದ ದುಡಿಯುತ್ತಿರುವ ನಮ್ಮ ಮೇಲೆ ಈ ರೀತಿ ಪತ್ರಿಕೆಯೊಂದು ಬರೆದಿರುವುದು ಬೇಸರ ತಂದಿದೆ. ಆರೋಪ ಮಾಡಿದವರೇ ಬಂದು ಶವ ಪರೀಕ್ಷೆ ಮಾಡಲಿ ಎಂದರು.

ಮರಣೋತ್ತರ ಪರೀಕ್ಷೆ ನಡೆಸುವುದು ನುರಿತ ಕೆಲಸಗಾರರಿಂದ ಮಾತ್ರ ಸಾಧ್ಯ ಸುಧಾಕರ್ ಮತ್ತು ಅವರ ತಂಡ ಕೆಲಸದಲ್ಲಿ ನೈಪುಣ್ಯತೆ ಹೊಂದಿದ್ದು, ಕಳೆದ ಹಲವಾರು ವರ್ಷಗಳಿಂದ ಉತ್ತಮ ಸೇವೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆರೋಗ್ಯ ರಕ್ಷಣಾ ಸಮಿತಿ ಮೂಲಕ ಮರಣೋತ್ತರ ಪರೀಕ್ಷೆಗೆ ಇಂತಿಷ್ಟೇ ಹಣ ನೀಡಬೇಕು ಎಂದು ಸಹಾಯಕ ಆಯುಕ್ತರು ಹಾಗೂ ಶಾಸಕರಲ್ಲಿ ಮನವಿ ಮಾಡಿದ್ದೇನೆ ಎಂದ ಅವರು, ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಸುಳ್ಳು. ಇದರ ಹಿಂದಿನ ಸತ್ಯ ಬಯಲಿಗೆ ಬರಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಆಗ್ರಹಿಸಿದರು..

ಕೇವಲ 21 ವರ್ಷದ ಯುವಕನನ್ನು ಕಳೆದುಕೊಂಡ ನೋವಿನಲ್ಲಿ ನಾವಿದ್ದೇವೆ. ಬೆಳಿಗ್ಗೆ 7 ಗಂಟೆಗೆ ಆಸ್ಪತ್ರೆಗೆ ಬಂದಿದ್ದೇವೆ. ಪೊಲೀಸರಿಂದ ಅಗತ್ಯ ಕ್ರಮಗಳು ಮುಗಿದರೂ ಶವ ಪರೀಕ್ಷೆ ನಡೆಸುತ್ತಿಲ್ಲ ಎಂದು ಮೃತ ಯುವಕನ ಸಂಬಂಧಿಯೊಬ್ಬರು ಮಾದ್ಯಮದ ಮುಂದೆ ಅಲವತ್ತುಕೊಂಡರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top