ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾಗಿ ಈರಯ್ಯ ದೂಂತೂರು

ಸುಳ್ಯ: ಸುಳ್ಯ ಠಾಣಾ ಪೊಲೀಸ್ ಉಪನಿರೀಕ್ಷಕರಾಗಿ ಈರಯ್ಯ ದೂಂತೂರು ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ.

ಈ ಹಿಂದೆ ಸುಳ್ಯ ಎಸ್‍ ಐ ಆಗಿರುವ  ದಿಲೀಪ್ ಅವರಿಗೆ ವರ್ಗಾವಣೆಯಾಗಿದ್ದು, ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸ್ಥಾನಕ್ಕೆ ಈರಯ್ಯ ದೂಂತೂರು ಅವರನ್ನು ನೇಮಕ ಮಾಡಲಾಗಿದೆ.

ಈರಯ್ಯ ದೂಂತೂರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್‍ ಐ ಆಗಿ ಬಳಿಕ ಬೆಳ್ಳಾರೆ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದರು. ಬಳಿಕ ಉಪ್ಪಿನಂಗಡಿ, ಶಿರಸಿಯಲ್ಲಿ ಕರ್ತವ್ಯ ನಿರ್ವಹಿಸಿ ಕುಂದಾಪುರದಲ್ಲಿ ಎಸ್‍ ಐ ಆಗಿ ಸೇವೆ ಸಲ್ಲಿಸಿದ್ದರು.































 
 

ಅವರು ಮೂಲತಃ ಬೆಂಗಳೂರಿನವರಾಗಿದ್ದು, ಕವಿ, ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top