ಪುತ್ತೂರು: ಪುತ್ತೂರು ಇನ್ನರ್ ವೀಲ್ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು.
ಇನ್ನರ್ ವೀಲ್ ಕ್ಲಬ್ ಜಿಲ್ಲಾ ಐಎಸ್‍ಒ ರಜನಿ ಭಟ್ ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರಿದೇವಿ ರೈ, ಉಪಾಧ್ಯಕ್ಷೆ ರಾಜೇಶ್ವರಿ ಆಚಾರ್, ಕೋಶಾಧಿಕಾರಿ ಸೀಮಾ ನಾಗರಾಜ್, ಕ್ಲಬ್‍ಸಂಪಾದಕಿಯರಾದ ಸುಧಾ ಕಾರ್ಯಪ್ಪ, ಐಎಸ್‍ಒ ಅಶಾ ನಾಯಕ್, ವೆಬ್‍ಕೋ-ಆರ್ಡಿನೇಟರ್ ವಚನಾ ಜಯರಾಮ್, ನಿಕಟಪೂರ್ವ ಅಧ್ಯಕ್ಷೆ ಟೈನಿ ದೀಪಕ್‍ಅವರಿಗೆ ಪ್ರದಾನ ಮಾಡಲಾಯಿತು. ನಿರ್ದೇಶಕರಾದ ರಾಜಿ ಬಲರಾಮ್, ರಮಾ, ಪ್ರಭಾಕರ್, ಪುಷ್ಪಾ ಕೆದಿಲಾಯ, ವೈ.ವಿಜಯಲಕ್ಷ್ಮೀ ಶೆಣೈ, ವೀಣಾ ಬಿ.ಕೆ. ಅವರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಮನೋರಮ ಸೂರ್ಯ ವರದಿ ವಾಚಿಸಿದರು. ಶ್ರೀದೇವಿ ರೈ ಪ್ರಶಂಸನಾ ಪತ್ರ ಮಂಡಿಸಿದರು. ಕ್ಲಬ್‍ಅಧ್ಯಕ್ಷೆ ಟೈನಿ ದೀಪಕ್ ಸ್ವಾಗತಿಸಿದರು. ಕೃಷ್ಣವೇಣಿ ಮುಳಿಯ ಪ್ರಾರ್ಥಿಸಿದರು. ಅನಿತಾ ಎಸ್. ಶೆಟ್ಟಿ ಪ್ರಾರ್ಥನೆ ನೆರವೇರಿಸಿದರು.