ಬಾಲಕಿಯರಿಗೆ ಕಿರುಕುಳ | ಮದ್ರಸಾ ಶಿಕ್ಷಕನ ಬಂಧನ

ಕಾಸರಗೋಡು: ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪಿ ಉಪ್ಪಿನಂಗಡಿ ಮೂಲದ ಮದ್ರಸಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಳಂತಿಲ ಹೌಸ್ ನಿವಾಸಿ ಅಬ್ದುಲ್ ಹಮೀದ್ (55) ಬಂಧಿತ ಆರೋಪಿ.

ಕಾಸರಗೋಡಿನಲ್ಲಿ ಮದ್ರಸಾ ಶಿಕ್ಷಕನಾಗಿದ್ದ ಆರೋಪಿ 7-8 ನೇ ತರಗತಿ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು. ಆದೂರು ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top