ಜೂ.16 : ಪುತ್ತೂರು ಅಂಚೆ ಕಚೇರಿಯಲ್ಲಿ ತ್ರೈಮಾಸಿಕ ಅಂಚೆ ಅದಾಲತ್

ಪುತ್ತೂರು: ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ  ಅದಾಲತ್ ಜೂ.16 ರಂದು ಬೆಳಿಗ್ಗೆ 11.30 ಕ್ಕೆ ಪುತ್ತೂರು ಅಂಚೆ  ವಿಭಾಗದ   ಹಿರಿಯ  ಅಂಚೆ  ಅಧೀಕ್ಷಕರ  ಕಚೇರಿಯಲ್ಲಿ  ನಡೆಯಲಿದೆ .

ಅದಾಲತ್ತಿನಲ್ಲಿ, ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯ  ಅಂಚೆ  ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು  ಕೊರತೆಗಳನ್ನು, ತಕರಾರುಗಳನ್ನು  ಪರಶೀಲಿಸಲಾಗುವುದು. 

ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ  ದೂರುಗಳನ್ನು   ಪತ್ರಮುಖೇನ , ಅಂಚೆ  ಅದಾಲತ್  ತಲೆಬರಹದಡಿ ಜೂ.16 ರೊಳಗೆ  ಹಿರಿಯ   ಅಂಚೆ  ಅಧೀಕ್ಷಕರು , ಪುತ್ತೂರು ವಿಭಾಗ  , ಪುತ್ತೂರು  -574201,   ವಿಳಾಸಕ್ಕೆ  ದೂರುಗಳನ್ನು  ಕಳುಹಿಸಬಹುದು  , ಹಾಗೆಯೇ   ಅದೇ  ದಿನ  ಗಂಟೆ   11.30 a.m.   ಓಳಗೆ ದೂರವಾಣಿ  ಸಂಖ್ಯೆ 08251-230201,230295 ಕ್ಕೆ ನೇರವಾಗಿಯೂ   ಸಂಪರ್ಕಿಸಬಹುದು.  ತಮ್ಮ  ದೂ ರುಗಳನ್ನು   ಮಿಂಚಂಚೆ [email protected]  ಮೂಲಕ   ಅದಾಲತ್ತಿಗೆ ಮೊದಲು ತಲುಪುವಂತೆ   ಕಳುಹಿಸುವುದು.  ಪುತ್ತೂರು   ಅಂಚೆ  ವಿಭಾಗಕ್ಕೆ  ಸಂಬಂಧಿಸಿದ  ದೂರುಗಳನ್ನು ಮಾತ್ರ  ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top