ಗ್ರಾಮಸ್ಥರಿಂದ ಪಾಣಂಬು ರಸ್ತೆ ದುರಸ್ಥಿ | ಪಂಚಾಯತ್ ಸದಸ್ಯರು, ಕಾರ್ಯಕರ್ತರು ಓಟು ಕೇಳಲಷ್ಟೇ ಸೀಮಿತ

ಪುತ್ತೂರು: ಕಳೆದ ಹಲವು ವರ್ಷಗಳಿಂದ ಹದಗೆಟ್ಟ ರಸ್ತೆಯಿಂದಾಗಿ ಊರಿನ ನಾಗರಿಕರು ಸಮಸ್ಯೆಯನ್ನು ಎದುರಿಸುತ್ತಿದ್ದು, ಸಮಸ್ಯೆಯಿಂದ ಮುಕ್ತಿ ಸಿಗಲು ಊರಿನವರು ಸೇರಿ ಪಾಣಂಬು ರಸ್ತೆಯನ್ನು ಜಲ್ಲಿ ಹಾಕಿ ಶ್ರಮದಾನದ ಮೂಲಕ ದುರಸ್ಥಿ ಕಾರ್ಯ ನಡೆಸಿದರು.

ಮುಖ್ಯವಾಗಿ ಮಳೆಗಾಲದಲ್ಲಿ ಶಾಲಾ ವಾಹನ ಈ ರಸ್ತೆಯಲ್ಲಿ ಬರುವುದರಿಂದ ಮಕ್ಕಳು ತೊಂದರೆ ಅನುಭವಿಸುತ್ತಾ ಬಂದಿದ್ದರು. ಸರಕಾರ ಹಾಗೂ ಪಂಚಾಯತ್ ಈ ರಸ್ತೆಯ ಅಭಿವೃದ್ಧಿ ಬಿಡಿ ದುರಸ್ಥಿ ಕಾರ್ಯಕ್ಕೂ ಕೈಹಾಕಿಲ್ಲ. ಓಟು ಕೇಳಲು ಬರುವ ಕಾರ್ಯಕರ್ತರು,ಪಂಚಾಯತ್ ಸದಸ್ಯರು ಇಲ್ಲಿ ಹೆಸರಿಗಷ್ಟೇ.ಅವರಿಗೆ ಚುನಾವಣೆ ಬರುವಾಗ ಮಾತ್ರ ನಮ್ಮ ಊರಿನ ದಾರಿ ಮತ್ತು ಜನರ ನೆನಪಾಗುವುದು ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಶಿವರಾಮ್ ಗೌಡ ಪಾಣಂಬು, ಗಿರೀಶ್ ಗೌಡ ಪಾನಂಬು,, ಕೃಷ್ಣಪ್ಪ ಪೂಜಾರಿ ಪಾಣಂಬು, ಗಣೇಶ್ ಸರಕಾರೆ, ವಸಂತ ಪೂಜಾರಿ ಪಾಣಂಬು, ವಿಶ್ವನಾಥ ಕರ್ಪುತಮೂಳೆ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top