ಶುಲ್ಕರಹಿತ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಜೂ.14 ಬುಧವಾರ ಕೊನೆಯ ದಿನಾಂಕ

ಪುತ್ತೂರು: ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಇಂದು ಜೂ.14 ರ ತನಕ ಮಾತ್ರ ಲಭ್ಯವಿದ್ದು, ಯಾವುದೇ ಶುಲ್ಕವಿರುವುದಿಲ್ಲ. ಇನ್ನು ಕೆಲವೇ ಗಂಟೆಗಳು ಬಾಕಿಯಿದ್ದು, ಈಗಲೇ ಅಪ್ಡೇಟ್ ಮಾಡಿಬಿಡಿ.

ಭಾರತದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, 10 ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ (Aadhaar card Update) ಮಾಡೋದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದ್ದು, ಉಚಿತವಾಗಿ ಅಪ್ಡೇಟ್‌ ಮಾಡಲು ಅವಕಾಶ ನೀಡಿತ್ತು. ಯಾವುದೇ ಶುಲ್ಕವಿಲ್ಲದೆ ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಇದೇ ಜೂನ್‌ 14ರ ಬುಧವಾರ ಕೊನೆಯ ದಿನವಾಗಿದೆ. ಈ ಸೌಲಭ್ಯ ಮೈ ಆಧಾರ್ ಪೋರ್ಟಲ್ ನಲ್ಲಿ ಮಾತ್ರ ಲಭ್ಯವಿದೆ. ಆನ್‌ಲೈನ್‌ ಮೂಲಕ ಉಚಿತವಾಗಿ ಅಪ್ಡೇಟ್‌ ಮಾಡಬಹುದು. ಆಧಾರ್ ಕೇಂದ್ರಗಳಲ್ಲಿ ಈಗಲೂ ಈ ಕೆಲಸಕ್ಕೆ 50ರೂ. ಶುಲ್ಕ ಪಾವತಿಸಬೇಕು.

ಹೀಗಾಗಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ನೀಡಿರುವ ಗಡುವು ಪೂರ್ಣಗೊಳ್ಳಲು ಇನ್ನು ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿವೆ. 10 ವರ್ಷಗಳ ಹಿಂದೆ ನೀಡಲಾದ ಹಾಗೂ ಈ ತನಕ ಅಪ್ಡೇಟ್ ಮಾಡಲಾಗದ ಆಧಾರ್ ಕಾರ್ಡ್ ಗಳನ್ನು ನವೀಕರಿಸಲು ಯುಐಡಿಎಐ ಉತ್ತೇಜನ ನೀಡುತ್ತಿದೆ.

ಆಧಾರ್‌ ಅಪ್ಡೇಟ್ ಯಾರೆಲ್ಲಾ ಮಾಡಬೇಕು :
ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಬಯೋಮೆಟ್ರಿಕ್ ಡೇಟಾ, ವಿಳಾಸ, ಇಮೇಲ್, ಫೋನ್ ನಂಬರ್ ಹಾಗೂ ಇತರ ಮಾಹಿತಿಗಳಲ್ಲಿ ಯಾವುದೇ ಬದಲಾವಣೆ ಆಗಿದ್ದರೆ ಅವುಗಳನ್ನು ಆಧಾರ್ ನಲ್ಲಿ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಮಗುವಿಗೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಐದು ವರ್ಷವಾದಾಗ ಹಾಗೂ 15 ವರ್ಷವಾದಾಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಈ ಸನ್ನಿವೇಶಗಳನ್ನು ಹೊರತುಪಡಿಸಿದರೆ ಸದ್ಯ ಯುಐಡಿಎಐ ಸೂಚನೆಯಂತೆ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದರೆ ಅದನ್ನು ಅಪ್ಡೇಟ್ ಮಾಡುವುದು ಅಗತ್ಯ.































 
 

ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ? :

  • 1: ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • 2: ‘My Aadhaar’ ಮೇಲೆ ಕ್ಲಿಕ್ ಮಾಡಿ
  • 3: ‘Update Your Aadhaar’ ಅನ್ನು ಆಯ್ಕೆ ಮಾಡಿಕೊಳ್ಳಿ
  • 4: ‘Update demographics data online’ ಮೇಲೆ ಕ್ಲಿಕ್ ಮಾಡಿ
  • 5: ‘Proceed to update Aadhaar’ ಅನ್ನು ಬಳಿಕ ಆಯ್ಕೆ ಮಾಡಿ
  • 6: ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
  • 7: ಕ್ಯಾಪ್ಚಾ ವೆರಿಫಿಕೇಷನ್ ಅನ್ನು ಮಾಡಿ
  • 8: Send OTP ಮೇಲೆ ಕ್ಲಿಕ್ ಮಾಡಿ
  • 9: ‘Update Demographics Data’ ಮೇಲೆ ಕ್ಲಿಕ್ ಮಾಡಿ
  • 10: ನವೀಕರಿಸಲು ವಿವರಗಳ ಆಯ್ಕೆಯನ್ನು ಆಯ್ಕೆಮಾಡಿ
  • 11: ಹೊಸ ವಿವರಗಳನ್ನು ನಮೂದಿಸಿ
  • 12: ದಾಖಲೆಗಳ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ
  • ಹಂತ 13: ನಮೂದಿಸಿದ ಮಾಹಿತಿಯು ನಿಖರವಾಗಿದೆಯೇ ಎಂದು ಪರಿಶೀಲಿಸಿ, ಒಟಿಪಿ ಉಲ್ಲೇಖಿಸಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top