ಅಕ್ಷಯ ಕಾಲೇಜಿನಲ್ಲಿ ’ಅಕ್ಷಯ ವೈಭವ- 2023 ವಾರ್ಷಿಕೋತ್ಸವ  ಸಮಾರಂಭ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ  ’ಅಕ್ಷಯ ವೈಭವ’ ವಾರ್ಷಿಕೋತ್ಸವ  ಸಮಾರಂಭ ನಡೆಯಿತು.

ಮಂಗಳೂರು ವಿ.ವಿ ಉಪಕುಲಪತಿ ಡಾ. ಜಯರಾಜ್ ಅಮೀನ್ ದೀಪ ಬೆಳಗಿಸಿ ಉದ್ಘಾಟಿಸಿ, ಅತೀ ಕಡಿಮೆ ಸಮಯದಲ್ಲಿ ವೃತ್ತಿಪರ ಕೋರ್ಸ್‌ನೊಂದಿಗೆ ಕಾಲೇಜು ಪ್ರಾರಂಭಿಸಿ, ವಿ.ವಿ, ರಾಷ್ಟ್ರ-ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಕಾಲೇಜಿನ ಗರಿಮೆಯನ್ನು ಹೆಚ್ಚಿಸಿದೆ. ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೊಂದಿಗೆ ಜೀವನಕ್ಕೆ ಬೇಕಾದ ಕೌಶಲ್ಯ ನೀಡುವಲ್ಲಿ ಅಕ್ಷಯದಂತಹ ಸಂಸ್ಥೆಯ ಅವಶ್ಯಕತೆಯಿದೆ. ವಿದ್ಯಾರ್ಥಿಗಳಿಗೆ ಹೆತ್ತವರ ಕೊಡುಗೆಯಷ್ಟೇ ಶಿಕ್ಷಕರ ಕೊಡುಗೆಯೂ ಅವಶ್ಯವಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ’ಸ್ವ ಇಚ್ಛೆಯ ಮೇರೆಗೆ ಕೋರ್ಸ್‌ಗಳನ್ನು ಆಯ್ಕೆಮಾಡಿಕೊಂಡಿರುವ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ’ ಎಂದು ಶುಭಹಾರೈಸಿದರು.



































 
 

ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಅಧ್ಯಕ್ಷತೆ ವಹಿದಿ ಮಾತನಾಡಿ, ವಾರ್ಷಿಕೋತ್ಸವ ಎಂಬುದು ಎಲ್ಲಾ ಜಾತಿ, ಧರ್ಮ, ಭಾಷೆ ಎಲ್ಲಕ್ಕಿಂತ ಮೀರಿದ ಹಬ್ಬವಾಗಿದೆ ಎಂದು ಹೇಳಿದರು.

ಕಾಲೇಜಿನ ಹಳೆ ವಿದ್ಯಾರ್ಥಿ ಅರವಿಂದ್ರ ಪ್ರೈ.ಲಿ. ಬೆಂಗಳೂರು ಮೋಟಾರ್‍ಸ್ ಆಪರೇಷನ್ ಮ್ಯಾನೇಜರ್  ಶಮಂತ್ ಕೋಲ್ಯ ಮಾತನಾಡಿ, ಪುಸ್ತಕಗಳು ನೀಡುವ ಜ್ಞಾನದ ಹಾಗೆಯೇ ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.

ಈ ಸಂದರ್ಭ ಮಂಗಳೂರು ವಿ.ವಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಶೈಕ್ಷಣಿಕ ವರ್ಷದ ಪರೀಕ್ಷೆಗಳಲ್ಲಿ ಟಾಪರ್‍ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಗಗನ್‌ದೀಪ್ ಮತ್ತು ಪ್ರಣಮ್ಯಾ ಸಿ.ಎ ಅವರನ್ನು ಸನ್ಮಾನಿಸಲಾಯಿತು.  ಫ್ಯಾಶನ್ ಶೋ ವಿಜೇತರನ್ನು ಗೌರವಿಸಲಾಯಿತು.

ಸಭಾಕಾರ್ಯಕ್ರಮದ ನಂತರ ಅಕ್ಷಯ ವಿದ್ಯಾರ್ಥಿಗಳಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮ ನೇರವೇರಿತು.

ಅಕ್ಷಯ ಕಾಲೇಜಿನ ಆಡಳಿತ ವ್ಯವಸ್ಥಾಪಕಿ ಕಲಾವತಿ ಜಯಂತ್, ಪ್ರಿನ್ಸಿಪಾಲ್ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕಾಲೇಜಿನ ಟ್ರಸ್ಟಿ ಆನಂದ ಆಚಾರ್ಯ ವಿದ್ಯಾರ್ಥಿ ನಾಯಕ ಗಗನ್‌ದೀಪ್ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರತೀಕ್ ರೈ ಸ್ವಾಗತಿಸಿ  ಗ್ರಂಥಪಾಲಕಿ ಪ್ರಭಾವತಿ ವಂದಿಸಿದರು. ಅಕ್ಷಯ ವಿದ್ಯಾರ್ಥಿ ಬಳಗ ಪ್ರಾರ್ಥಿಸಿ, ಉಪನ್ಯಾಸಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top