ರಾಷ್ಟ್ರಮಟ್ಟದ 18ನೇ ರಾಷ್ಟ್ರೀಯ ಜೀವರಕ್ಷಕ ಈಜು ಪಂದ್ಯಾಟದಲ್ಲಿ ಲಿಖಿತ್ ರಾಮಚಂದ್ರರಿಗೆ 4 ಚಿನ್ನ, 1 ಬೆಳ್ಳಿ ಪದಕ

ಪುತ್ತೂರು: ಸಂತ ಫಿಲೋಮಿನಾ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಲಿಖಿತ್ ರಾಮಚಂದ್ರ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ರೇ  ಸೆಂಟರ್ ಈಜುಕೊಳದಲ್ಲಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಭಾರಿಗೆ  “ರೆಸ್ಕ್ಯೂ ಇಂಡಿಯಾ -2023” ಹೆಸರಿನಲ್ಲಿ ನಡೆದ ರಾಷ್ಟ್ರಮಟ್ಟದ 18ನೇ ರಾಷ್ಟ್ರೀಯ ಜೀವರಕ್ಷಕ ಈಜು ಪಂದ್ಯಾಟದಲ್ಲಿ ಭಾಗವಹಿಸಿ 4 ಚಿನ್ನ ಮತ್ತು 1 ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

ಅವರು ಪುತ್ತೂರಿನ ಶಿವರಾಮ ಕಾರಂತ ಭಾಲಾವನದ ಈಜುಕೊಳದಲ್ಲಿ ಈಜು ತರಬೇತುದಾರ ಪಾರ್ಥ ವಾರಣಾಸಿ ನಿರ್ದೇಶನದಲ್ಲಿ ಜೀವ ರಕ್ಷಕ ಈಜು ತರಬೇತುದಾರ ರೊಹಿತ್ ಅವರಿಂದ ಜೀವರಕ್ಷಕ ಈಜು ಮತ್ತು ದೀಕ್ಷಿತ್ ಅವರಿಂದ ಕಳೆದ 8 ವರ್ಷಗಳಿಂದ ಈಜು ತರಬೇತಿ ಪಡೆಯುತ್ತಿದ್ದಾರೆ.

ಈತ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ. ಹಾಗೂ ದೀಪ ದಂಪತಿ ಪುತ್ರ































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top