ಸವಣೂರುನಲ್ಲಿ ತಂಬಾಕು ವಿರೋಧಿ ದಿನಾಚರಣೆ

ತಂಬಾಕು ಸೇವನೆ ರೋಗವನ್ನು ಕ್ರಯಕ್ಕೆ ಪಡೆದಂತೆ – ತಾರಾನಾಥ ಸವಣೂರು

ಸವಣೂರು :  ತಂಬಾಕು ಸೇವನೆಯೊಂದು ಚಟ. ಈ ಚಟದಿಂದ ರೋಗಗಳನ್ನು ಕ್ರಯಕ್ಕೆ ಪಡೆದಂತೆ ಎಂದು ವೀರಮಂಗಲ ಶಾಲಾ ಮುಖ್ಯಗುರು ತಾರಾನಾಥ ಸವಣೂರು ನುಡಿದರು. ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ಸವಣೂರು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ಇವುಗಳ ಆಶ್ರಯದಲ್ಲಿ ಸವಣೂರಿನ ಶ್ರೀ ವಿನಾಯಕ ಸಭಾ ಭವನದಲ್ಲಿ ನಡೆದ ತಂಬಾಕು ವಿರೋಧಿ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. 

ತಂಬಾಕು ಸೇವಿಸುವವ ಕೆಟ್ಟವನಲ್ಲ ಆದರೆ ತಂಬಾಕು ಕೆಟ್ಟದ್ದು. ಅತಿಯಾದ ತಂಬಾಕು ಸೇವನೆ ಮಾರಕ ಅರ್ಬುದ ರೋಗಕ್ಕೆ ಕಾರಣವಾಗುತ್ತದೆ, ಬೀಡಿ ಸಿಗರೇಟು ಸೇದುವ ವ್ಯಕ್ತಿಗಿಂತ ಆತನ ಹತ್ತಿರ ಇರುವ ವ್ಯಕ್ತಿಗೆ ಹೆಚ್ಚು ದುಷ್ಪರಿಣಾಮವಾಗುತ್ತದೆ. ಇಂದು ಯುವಜನತೆ ಕೆಟ್ಟ ವ್ಯಸನಗಳಿಗೆ ಬಲಿಯಾಗುವುದು ದೇಶದ ಅತ್ಯಮೂಲ್ಯ ಸಂಪತ್ತಿಗೆ ಕೊಲ್ಲಿಯಿಟ್ಟಂತೆ. ನಮ್ಮಿಂದ ಬಿಡಲು ಸಾಧ್ಯವಾಗುವ ವ್ಯಸನವನ್ನು ಯಾಕೆ ಅಪ್ಪಬೇಕು ಎಂದು ನುಡಿದರು.































 
 

ಕ್ಷಣಿಕ ಸುಖಕ್ಕಾಗಿ  ಜೀವನ ಪರ್ಯಂತ ನರಳುವಂತೆ ಮಾಡುವ  ಗಾಂಜಾ ಅಫೀಮು, ಸಂಸ್ಕಾರವನ್ನು,  ಸಂಸಾರವನ್ನು ಕೊಲ್ಲುತ್ತದೆ. ಸಮಾಜದಲ್ಲಿ ಯಾವುದೇ ಗೌರವ ಸಿಗದೆ ಜೀವನ , ಕೆಟ್ಟ ವ್ಯಸನ ದಲ್ಲಿ ಅಂತ್ಯವಾಗುವುದನ್ನು ಜಾಗೃತ ಸಂಘಟನೆಗಳು ತಡೆಯಬೇಕು ಎಂದರು. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ನೂರಾರು ಕುಟುಂಬಗಳಿಗೆ ನವಜೀವನ ನೀಡಿದೆ ಎಂದರು.

 ಕಾರ್ಯಕ್ರಮ ಸಂಯೋಜನೆ ಮಾಡಿದ ಕಡಬ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ,ವಕೀಲರಾದ ಮಹೇಶ್ ಸವಣೂರು ಇವರು ಮಾತನಾಡಿ ಮನಸ್ಸನ್ನು ಸುಡುವ ತಂಬಾಕು ನಮಗೆ ಯಾಕೆ ಬೇಕು ಸ್ವಸ್ತ ಸಮಾಜ ನಿರ್ಮಾಣಕ್ಕಾಗಿ ತಂಬಾಕು ಸೇವನೆಯಿಂದ ದೂರವಿರೋಣ ಆ  ನಿಟ್ಟಿನಲ್ಲಿ ಜನಜಾಗೃತಿ ಮೂಡಿಸೋಣ ಎಂದರು.

ಸಭಾಧ್ಯಕ್ಷತೆಯನ್ನು ಸವಣೂರು ಒಕ್ಕೂಟ ಅಧ್ಯಕ್ಷ ಹೊನ್ನಪ್ಪ ಗೌಡ ವಹಿಸಿದ್ದರು.ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಜಗದೀಶ್ ಇಡ್ಯಾಡಿ,ಕಾರ್ಯದರ್ಶಿ ವಿಶಾಲಾಕ್ಷಿ, ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.ವಲಯ ಮೇಲ್ವಿಚಾರಕಿ  ಹರ್ಷ ಕುಮಾರಿ ಪ್ರಾಸ್ತಾವಿಕ ಮಾತನಾಡಿದರು  ಸೇವಾ ಪ್ರತಿನಿಧಿ ಪ್ರಮೀಳಾ ಸ್ವಾಗತಿಸಿ, ಪ್ರೇಮ ವಂದಿಸಿದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top