ಯಶಶ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮುಂದುವರೆಸಿ | ಉಸ್ತುವಾರಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಆರೋಗ್ಯ ತುರ್ತು ಸಂದರ್ಭದಲ್ಲಿ ಬಡವರಿಗೆ ವರದಾನವಾಗಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಹಿಂದಿನ ಸರಕಾರ ನಿಷ್ಕ್ರೀಯಗೊಳಿಸಿದ್ದು ಅದನ್ನು ಮುಂದುವರೆಸುವಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಮಾಡಿದ್ದಾರೆ.

 ಗ್ರಾಮೀಣ ಪ್ರದೇಶಗಳ ಸಹಾಕಾರಿ ಸಂಘಗಳ ಸದಸ್ಯರು, ಸ್ತ್ರೀ ಶಕ್ತಿ ಗುಂಪು ಸ್ವ-ಸಹಾಯ ಸಂಘ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಈ ಯೋಜನೆಗೆ ಒಳಪಡುತ್ತಾರೆ. ಈ ಯೋಜನೆಯಲ್ಲಿ ಹಲವಾರು ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಳು ಒಳಗೊಂಡಿರತ್ತದೆ.

ಈ ಹಿಂದೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಗಳಿಗೆ ಸರ್ಕಾರದಿಂದ ಮೊತ್ತ ಪಾವತಿಯಾಗದಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ  ಯೋಜನೆಯನ್ನು ನಿಷ್ಕ್ರೀಯಗೊಳಿಸಿರುತ್ತಾರೆ, ಪುತ್ತೂರು  ತಾಲೂಕಿನ ಯಾವ ಆಸ್ಪತ್ರೆಯು ಈ ಯೋಜನೆಯಲ್ಲಿ ಒಳಗೊಂಡಿರುವುದಿಲ್ಲ. ಯಶಸ್ವಿನಿ ಆರೋಗ್ಯ ಯೋಜನೆಯು ಬಡವರ ಪಾಲಿಗೆ ಅರ್ತಿ ಅಮೂಲ್ಯವಾದ ಉಚಿತ ಆರೋಗ್ಯ ಯೋಜನೆಯಾಗಿರುವುದರಿಂದ ದಕ್ಷಿಣಕನ್ನಡ ಜಿಲ್ಲೆ ಹಾಗೂ ಮತ್ತೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರಾರಂಭಿಸುವಂತೆ ಉಸ್ತುವಾರಿ ಸಚಿವರ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top