ಕಡಬ: ರಾಜ್ಯ ಸರಕಾರದ ಮಹಾತ್ವಾಕಾಂಕ್ಷೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಕಡಬದಲ್ಲಿ ಕಾಂಗ್ರೇಸ್ ನಾಯಕರು ಹಾಗೂ ಕಾರ್ಯಕರ್ತರು ಸಂಭ್ರಮ ಸಡಗರದಿಂದ ಚಾಲನೆ ನೀಡಿದರು.
ಕಡಬ-ಶಾಂತಿಮೊಗೇರು-ಪುತ್ತೂರು ಸರಕಾರಿ ಬಸ್ಸಿಗೆ ಕಡಬದಲ್ಲಿ ಶೃಂಗಾರ ಮಾಡಿ ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೇಸ್ ಧ್ವಜ ಹಿಡಿದು ಮುಖ್ಯ ಮಂತ್ರಿ ಸಿದ್ದರಾಮಯ್ಯ , ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಘೋಷಣೆ ಕೂಗಿದರು. ಬಳಿಕ ಕಡಬ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಕ್ ಮೇಲಿನ ಮನೆ ತೆಂಗಿನ ಕಾಯಿ ಒಡೆಯುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಕಾಂಗ್ರೇಸ್ ಮುಖಂಡರಾದ ಶಾಲಿನಿ ಸತೀಶ್ ನಾಕ್, ಜ್ಯೋತಿ ಡಿ.ಕೋಲ್ಪೆ, ಹಾಗೂ ಜಯಂತಿ ಗಣಪಯ್ಯ ಅವರಿಗೆ ಉಚಿತ ಟಿಕೇಟು ನೀಡುವ ಮೂಲಕ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಗಣೇಶ್ ಕೈಕುರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಮಾರಿ ವಾಸುದೇವನ್, ಪ್ರಮುಖರಾದ ಸತೀಶ್ಚಂದ್ರ ಶೆಟ್ಟಿ, ಜಗದೀಶ್ ರೈ ಕೊಲಂಬೆತಡ್ಕ, ಮನೋಜ್ ಅಂಗಡಿ ಮನೆ, ಮಹಾಬಲ ನಾಕ್ ಮೇಲಿನಮನೆ, ಭವ್ಯ ಬಿಳಿನೆಲೆ , ಶಿವಶಂಕರ್ ಬಿಳಿನೆಲೆ, ಸತೀಶ್ ಕಳಿಗೆ, ಕಿರಣ್ ನೆಟ್ಟಣ, ರಾಜು ಮುಳಿಮಜಲು, ಲತೀಶ್ ಗುಂಡ್ಯ, ಇಸ್ಮಾಯಿಲ್ ಕಳಾರ , ಟಿ.ಎಂ.ಮ್ಯಾಥ್ಯೂ, ಮತ್ತಿತರರು ಉಪಸ್ಥಿತರಿದ್ದರು.
ಜೆಡಿಎಸ್ ಮುಖಂಡ ಹಾಜರು: ಸಾಮಾನ್ಯವಾಗಿ ಸರಕಾರದ ಕಾರ್ಯಕ್ರಮಗಳಲ್ಲಿ ವಿರೋಧ ಪಕ್ಷದವರು ಭಾಗವಹಿಸುವುದು ಅಪರೂಪ. ಆದರೆ ಕಾಂಗ್ರೇಸ್ ಸರಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಕಾರ್ಯಕ್ರಮದಲ್ಲಿ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಪಾಲ್ಗೊಂಡು ಅಚ್ಚರಿ ಮೂಡಿಸಿದರು.