ಸುಳ್ಯ : ಸುಳ್ಯ ಸಿಹೆಚ್ಎಸ್ ಸಿ ವಿಭಾಗ ವ್ಯಾಪ್ತಿಯ ಪುತ್ತೂರು ಉಪ್ಪಿನಂಗಡಿ ಪೆರಿಯಡ್ಕ ಕೊರಗಪ್ಪರವರ ಜಮೀನು ನಲ್ಲಿ ಯಂತ್ರಶ್ರೀ ನಾಟಿ ಯಂತ್ರದ ಚಾಲನ ತರಬೇತಿ ಕಾರ್ಯಾಗಾರ ಶನಿವಾರ ನಡೆಯಿತು.
ಕಾರ್ಯಾಗಾರವನ್ನು ರಾಧಮ್ಮ ಉದ್ಘಾಟಿಸಿದರು. ಕೇಂದ್ರ ಕಛೇರಿ ಕೃಷಿ ವಿಭಾಗದ ಯಂತ್ರಶ್ರೀ ಯೋಜನಾಧಿಕಾರಿ ಜಯನಂದ ಚಾಲಕರಿಗೆ ತರಬೇತಿಯನ್ನು ಉತ್ತಮ ರೀತಿಯಲ್ಲಿ ಪಡೆದುಕೊಂಡು ಸಿಹೆಚ್ಎಸ್ ಸಿ ಕೇಂದ್ರದಲ್ಲಿ ಉತ್ತಮ ಸೇವೆಯನ್ನು ನೀಡಿ ಎಂದು ತಿಳಿಸಿದರು.
ನಾಟಿ ಯಂತ್ರದ ಚಾಲನೆ ಮತ್ತು ಅನುಪಾಲನೆ ಮಾಡುವ ಬಗ್ಗೆ ತಾಂತ್ರಿಕ ಅಭಿಯಂತರ ತೇಜಸ್ ಮತ್ತು ಮೆಕಾನಿಕ್ ಉಲ್ಲಾಸ್ ಚಾಲಕರಿಗೆ ತರಬೇತಿ ನೀಡಿದರು. ಸಿಹೆಚ್ಎಸ್ ಸಿ ಸುಳ್ಯ ವಿಭಾಗದ ಯೋಜನಾಧಿಕಾರಿ ಮೋಹನ್ ಯೋಜನೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಪುತ್ತೂರು ಕೃಷಿ ಮೇಲ್ವಿಚಾರಕ ಉಮೇಶ್, ಸುಳ್ಯ ವಿಭಾಗದ ಸಿಹೆಚ್ಎಸ್ ಸಿ ವಿಭಾಗದ ಎಲ್ಲಾ ಪ್ರಬಂಧಕರು ಹಾಜರಿದ್ದರು. 21 ಮಂದಿ ಚಾಲಕರು ತರಬೇತಿಯಲ್ಲಿ ಪಾಲ್ಕೊಂಡಿದ್ದರು.